ಕ್ರೈಂ

ಬ್ಯೂಟಿ ಪಾರ್ಲರ್ ಹುಡುಗಿ ನೇಣಿಗೆ ಶರಣು, ಆತ್ಮಹತ್ಯೆ ಕಾರಣ ನಿಗೂಢ

ಮಂಗಳೂರು: ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಕಾವೂರು ಬಳಿಯ ಆಕಾಶಭವನ ಎಂಬಲ್ಲಿ ನಡೆದಿದೆ. ಆಕಾಶಭವನದ ಕಾಪಿಗುಡ್ಡೆ ನಿವಾಸಿ ಶಿಫಾಲಿ (22) ಮೃತ ಯುವತಿ. ಆಕಾಶಭವನದಲ್ಲಿ ಬ್ಯೂಟೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಎಂದಿನಂತೆ ಮನೆಗೆ ಮರಳಿದ್ದಳು. ಬಳಿಕ ಕೋಣೆಗೆ ತೆರಳಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯವರು ನೋಡುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪ್ರಜ್ವಲ್‌ ರೇವಣ್ಣ ಕೇಸ್ ಬಗ್ಗೆ ಸಿಂಗಾಪುರದ ಮಾಧ್ಯಮಗಳಲ್ಲೂ ಚರ್ಚೆ..! ಜಗತ್ತಿನ ಅತೀ ದೊಡ್ಡ ಲೈಂಗಿಕ ಅಪರಾಧ ಎಂದ ವಿದೇಶಿ ಮಾಧ್ಯಮಗಳು..!

ಬದುಕಿರುವಾಗಲೇ ಅಜ್ಜಿಗೆ ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿಗಳು! ತಹಶಿಲ್ದಾರ್ ಬಗ್ಗೆ ಜನರು ಹೇಳೋದೇನು?

ಸಂಪಾಜೆ: ಇಬ್ಬರು ವಿವಾಹಿತ ಮಹಿಳೆಯರು ದಿಢೀರ್ ನಾಪತ್ತೆ