ಗೂನಡ್ಕ: ಪುತ್ತೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಟೆಂಪೊ ಟ್ರಾವೆಲರ್ ಗೂಡ್ಸ್ ಗಾಡಿಗೆ ಸಂಪಾಜೆ ಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಯಾಗಿ ಸವಾರ ಮೃತ ಪಟ್ಟ ಘಟನೆ ಗೂನಡ್ಕ ಸಮೀಪ ಪೆಲ್ತಡ್ಕದಿಂದ ಶುಕ್ರವಾರ ತಡರಾತ್ರಿ ವರದಿಯಾಗಿದೆ. ಮೃತರನ್ನು ಸುಳ್ಯ ಕಸಬಾ ದುಗ್ಗಲಡ್ಕ ಕಂದಡ್ಕ ವಿನೋದ್ ಕುಮಾರ್ (23 ) ಎಂದು ಗುರುತಿಸಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.