ತೊಡಿಕಾನ: ರಾಷ್ಟ್ರೀಯ ಸ್ವಯಂ ಸಂಘದ ಹಿರಿಯ ಕಾರ್ಯಕರ್ತ ತೊಡಿಕಾನ ಗ್ರಾಮದ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷರಾಗಿರುವ ಕೃಷ್ಣಪ್ಪ (47) ಅನಾರೋಗ್ಯದಿಂದ ಶನಿವಾರ ಮುಂಜಾನೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅಡ್ಯಡ್ಕ ದಿ ಮಹಾಲಿಂಗ ನಾಯ್ಕ ಅವರ ಪುತ್ರರಾಗಿದ್ದಾರೆ. ಹಿಂದೂ ಸಂಘಟನೆಯಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಯೋಧ್ಯ ಶ್ರೀರಾಮಂದಿರದ ಕರಸೇವಕರಾಗಿದ್ದರು. ಸಹೋದರರಾದ ಮೋನಪ್ಪ ಶೇಷಪ್ಪ,ಸಹೋದರಿಯರಾದ ಸರಸ್ಚತಿ,ಕಮಲಾಕ್ಷಿ, ಜಯಲತಾ ಕುಟುಂಬಸ್ಥರನ್ನು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.