ಉಪ್ಪಿನಂಗಡಿಕರಾವಳಿಕ್ರೈಂವೈರಲ್ ನ್ಯೂಸ್

ಸುಬ್ರಹ್ಮಣ್ಯ: ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಹಾಗೂ ಬ್ಯಾಗ್‌ ಪತ್ತೆ, ಕೊಂಬೆಯಲ್ಲಿ ನೇತಾಡುತ್ತಿದ್ದ ಬಟ್ಟೆ..! ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ರಕ್ಷಿತಾರಣ್ಯದಲ್ಲಿ ಏನಿದು ನಿಗೂಢ ರಹಸ್ಯ..?

ನ್ಯೂಸ್ ನಾಟೌಟ್: ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ರಕ್ಷಿತಾರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ, ಬ್ಯಾಗ್ ಹಾಗೂ ಕೊಂಬೆಯಲ್ಲಿ ನೇತಾಡುತ್ತಿದ್ದ ಬಟ್ಟೆ ಅನುಮಾನಸ್ಪದವಾಗಿ ಸಿಕ್ಕಿದೆ. ಈ ಬಗ್ಗೆ ಬಿಳಿನೆಲೆ ಗ್ರಾಮದ ಚಂದ್ರಶೇಖರ್ ಅನ್ನುವವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚಂದ್ರಶೇಖರ್‌ ಅವರು ಏ. 19ರಂದು ಸ್ಥಳೀಯ ನಿವಾಸಿಗಳೊಂದಿಗೆ ಕಾಡಿಗೆ ಸೌದೆ ತರಲು ತೆರಳಿದ್ದರು. ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದಲ್ಲಿ ದಾರಿಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಬ್ಯಾಗ್‌ ಕಂಡುಬಂದಿತ್ತು. ಸ್ವಲ್ಪ ದೂರದಲ್ಲಿ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುತ್ತಿತ್ತು. ಕಾಡು ಪ್ರದೇಶದಲ್ಲಿ ಕೊಳೆತ ಮೃತದೇಹ ದೊರಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

Related posts

ಹಿಜಾಬ್ ನಿಷೇಧ ವಾಪಸ್ ಪಡೆದ್ರೆ ಶಾಲಾ-ಕಾಲೇಜುಗಳನ್ನು ಕೇಸರಿಮಯ ಮಾಡ್ತೇವೆ ಎಂದ ಶರಣ್ ಪಂಪವೆಲ್! ವಿಶ್ವ ಹಿಂದೂ ಪರಿಷತ್ ಈ ಬಗ್ಗೆ ನೀಡಿದ ಎಚ್ಚರಿಕೆಗಳೇನು?

ದಕ್ಷಿಣ ಕನ್ನಡದಿಂದ ಲೋಕಸಭಾ ಚುನಾವಣೆಗೆ ಒಕ್ಕಲಿಗ ಅಭ್ಯರ್ಥಿಯೇ ‘ಟ್ರಂಪ್ ಕಾರ್ಡ್’..? ಅಭ್ಯರ್ಥಿಗಳ ಪಟ್ಟಿಯಲ್ಲಿದೆ ಸುಳ್ಯದ ಏಕೈಕ ಒಕ್ಕಲಿಗನ ಹೆಸರು..!

12 ನಕ್ಸಲರು ಪೊಲೀಸರಿಗೆ ಶರಣು, 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದ ಸರ್ಕಾರ..!