ಕಾಸರಗೋಡು: ಈಗ ಎಲ್ಲೆಡೆ ಆನ್‌ಲೈನ್ ಕ್ಲಾಸ್‌ಗಳದ್ದೇ ಮಾತು. ಹಳ್ಳಿಯಲ್ಲಿ ವರ್ಕ್ ಫ್ರಮ್ ಹೋಮ್ ಇರುವವರು, ವಿದ್ಯಾರ್ಥಿಗಳು ಸರಿಯಾಗಿ ನೆಟ್‌ವರ್ಕ್ ಸಿಗದೆ ನಿತ್ಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ನೆಟ್‌ವರ್ಕ್ ಪಡೆಯುವುದಕ್ಕೆ ಇಲ್ಲದ ಸರ್ಕಸ್ ಮಾಡುತ್ತಿರುತ್ತಾರೆ. ಇಂತಹುದೇ ಸರ್ಕಸ್ ನಡೆಸಿ ಮರೆದ ಮೇಲಿಂದ ಕೆಳಕ್ಕೆ ಬಿದ್ದು ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಕಣ್ಣೂರಿನ ಕಣ್ಣವ ಬಳಿ ನಿನ್ನೆ ಸಂಜೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿ ಅನಂತು ಬಾಬು ನನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ಲಸ್ ವನ್ ಅಲೋಟ್ ಮೆಂಟ್ ವೀಕ್ಷಿಸಲು ಈತ ಮನೆ ಸಮೀಪದ ಮರ ಏರಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮೊಬೈಲ್ ರೇಂಜ್ ಲಭಿಸದಿರುವುದರಿಂದ ಮರವೇರಿ ರೆಂಬೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಬಿದ್ದು ಈ ಘಟನೆ ನಡೆದಿದ್ದು ,ಬೆನ್ನು ಮೂಳೆಗೆ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.