ಕ್ರೈಂ

ಗೂನಡ್ಕದಲ್ಲಿ ಕಾಣೆಯಾದವ ಕಾಡಿನಲ್ಲಿ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆ

1k

ಗೂನಡ್ಕ: ಸಾರಣೆ, ಟ್ಯಾಪಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ವಿಜಯ್‌ ಎನ್ನುವವರು ಗೂನಡ್ಕದ ಕಾಡಿನಲ್ಲಿ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರಿಗೆ 45 ವರ್ಷವಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕುಡಿತ ಕಾರಣವಾಯಿತೆ?

ಓಣಂ ದಿನ ಇದ್ದಕ್ಕಿದ್ದಂತೆ ಮನೆಯಿಂದ ವಿಜಯ್‌ ಕಾಣೆಯಾಗಿದ್ದರು. ಕಾಣೆಯಾಗುವುದಕ್ಕೂ ಮೊದಲು ಮದ್ಯದ ಬಾಟಲಿಗಾಗಿ ಮನೆಯವರೊಂದಿಗೆ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದ ನೊಂದು ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

See also  ಯೂಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಿಕೊಂಡ ಯುವತಿ..! ಮಗುವಿನ ಹತ್ಯೆ ಮಾಡಿದ್ದ ಪ್ರೇಮಿಗಳಿಗೆ ನ್ಯಾಯಾಂಗ ಬಂಧನ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget