ಬೆಂಗಳೂರು: ಅರ್ಜುನ ಪ್ರಶಸ್ತಿ ಪುರಸ್ಕೃತ ಕರ್ನಾಟಕದ ಹಿರಿಯ ಕಬಡ್ಡಿ ಪಟು ಹೊನ್ನಪ್ಪ ಗೌಡ ಅವರನ್ನು ಹೈದರಾಬಾದ್ ನ ಗಚ್ಚಿ ಬೌಲಿ ಕ್ರೀಡಾಂಗಣದಲ್ಲಿ ಗುರುವಾರ ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಪಿ.ವಿ.ಸಿಂಧು ಭೇಟಿಯಾದರು. ಸಿಂಧು ಅವರು ಕ್ರೀಡೆಯ ಅಭಿವೃದ್ಧಿಯ ಬಗ್ಗೆ ಹೊನ್ನಪ್ಪ ಅವರ ಜತೆ ಕೆಲ ಹೊತ್ತು ಮಾತನಾಡಿದರು. ಹೊನ್ನಪ್ಪ ಗೌಡ ಅವರು ಪ್ರಸ್ತುತ ಭಾರತದ ಸರಕಾರ ನೇಮಿಸಿರುವ ಆಲ್ ಇಂಡಿಯಾ ಸ್ಪೋಟ್ಸ್ ಕೌನ್ಸಿಲ್ ಸದಸ್ಯರಾಗಿದ್ದಾರೆ.