ದೇಶ-ಪ್ರಪಂಚ

ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹಳಿ ದಾಟುತ್ತಿದ್ದ ವಿದ್ಯಾರ್ಥಿನಿಗೆ ರೈಲು ಡಿಕ್ಕಿಯಾಗಿ ಸಾವು

ನ್ಯೂಸ್ ನಾಟೌಟ್: ಮೊಬೈಲ್‌ನಿಂದ ಎಷ್ಟು ಉಪಯೋಗವಿದೆಯೋ, ಅಷ್ಟೇ ಕೆಡುಕು ಕೂಡ ಇದೆ. ರೈಲು ಹಳಿ ದಾಟುವಾಗ, ರಸ್ತೆಯಲ್ಲಿ ನಡೆದು ಹೋಗುವಾಗ ಮತ್ತು ಡ್ರೈವಿಂಗ್​ ಮಾಡುವಾಗ ಯಾವುದೇ ಕಾರಣಕ್ಕೂ ಮೊಬೈಲ್​ ಫೋನ್​ ಬಳಸಬಾರದು. ಇಂಥ ಸಂದರ್ಭದಲ್ಲಿ ಫೋನ್ ಬಳಸಿ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡರೂ ಮತ್ತೇ ಮತ್ತೆ ಈ ಘಟನೆ ಮರುಕಳಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ವಿದ್ಯಾರ್ಥಿನಿಯೋರ್ವಳು ಪ್ರಾಣ ಕಳೆದುಕೊಂಡ ಘಟನೆ ಚೆನ್ನೈನ ಇರುಂಬುಲಿಯೂರ್​ನಲ್ಲಿ ನಡೆದಿದೆ.

ದುರಂತದಿಂದ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿಯನ್ನು ನಿಖಿತಾ ಕೆ. ಸಿಬಿ (19) ಎಂದು ಗುರುತಿಸಲಾಗಿದೆ. ಈಕೆ ಕೇರಳದ ಕೊಲ್ಲಂ ಜಿಲ್ಲೆಯ ಪುತ್ತೋರ್ ನಿವಾಸಿ. ತಮಿಳುನಾಡಿನ ತಾಂಬರಂನಲ್ಲಿರುವ ಎಂಸಿಸಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ಮನೋವಿಜ್ಞಾನ ವಿದ್ಯಾರ್ಥಿನಿಯಾಗಿದ್ದಳು. ಇರುಂಬುಲಿಯೂರ್​ನಲ್ಲಿ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದಳು. ಇರುಂಬುಲಿಯೂರ್​ನ ಹಳೆ ರೈಲ್ವೆ ಗೇಟ್​ ದಾಟುವಾಗ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾಳೆ.

ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ ನಿಖಿತಾ ರೈಲ್ವೆ ಕ್ರಾಸಿಂಗ್​ ಮಾಡುವಾಗ ಫೋನ್​ನಲ್ಲಿ ನಿರತರಾಗಿದ್ದ ಕಾರಣ ರೈಲನ್ನು ಗಮನಿಸಲಿಲ್ಲ ಎಂದು ತಿಳಿದುಬಂದಿದೆ. ಚೆನ್ನೈ-ಗುರುವಾಯೂರು ಎಕ್ಸ್​ಪ್ರೆಸ್​ ರೈಲು ನಿಖಿತಾಗೆ ಡಿಕ್ಕಿ ಹೊಡೆದಿದ್ದು, ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

Related posts

ಬಾತ್‌ ರೂಂನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು..! ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆ..!

ದಿನವಿಡೀ ಹಾಸಿಗೆಯಲ್ಲಿ ಮಲಗಿಕೊಂಡೆ ಇರುವ ಕೆಲಸ ಬೇಕಾ? ವೇತನ 1.5 ಲಕ್ಷ ರೂ.,ನಾಸಾದಿಂದ 24 ಜನರ ಹುಡುಕಾಟ

ರಾತ್ರಿ ಕರಾವಳಿಗೆ ಅಪ್ಪಳಿಸಿದ ‘ರೆಮಲ್’ ಚಂಡಮಾರುತ..! 1 ಲಕ್ಷ ಮಂದಿಯ ಸ್ಥಳಾಂತರ