ಕರಾವಳಿ

‘ದಿ ಗ್ರೇಟ್‌ ಸನ್‌ ಆಫ್‌ ಇಂಡಿಯಾ’ ಪ್ರಶಸ್ತಿಗೆ ಸ್ಪೀಕರ್‌ ಯು.ಟಿ. ಖಾದರ್‌ ಆಯ್ಕೆ

ನ್ಯೂಸ್‌ ನಾಟೌಟ್‌: ಇಂಡಿಯನ್‌ ಕಾನ್ಫರೆನ್ಸ್‌ ಆಫ್‌ ಇಂಟಲೆಕ್ಚುವಲ್ಸ್‌ ಅವರು ನೀಡುವ “ದಿ ಗ್ರೇಟ್‌ ಸನ್‌ ಆಫ್‌ ಇಂಡಿಯಾ” ಪ್ರಶಸ್ತಿಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಆಯ್ಕೆಯಾಗಿದ್ದಾರೆ. ಭಾನುವಾರ (ಜು.16 ) ದಿಲ್ಲಿಯ ಇಂಡಿಯಾ ಇಂಟರ್‌ ನ್ಯಾಶನಲ್‌ ಸೆಂಟರ್‌ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಒಡಿಶಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಮತ್ತು ಭಾರತೀಯ ಬುದ್ಧಿಜೀವಿಗಳ ಸಮ್ಮೇಳನದ ರಾಷ್ಟ್ರೀಯ ಅಧ್ಯಕ್ಷ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಛತ್ತೀಸ್‌ಗಢ ರಾಜ್ಯಪಾಲ ಬಿಸ್ವ ಭೂಷಣ ಹರಿಚರಣ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರ ಆತ್ಮಚರಿತ್ರೆಯ ಇಂಗ್ಲಿಷ್ ಅನುವಾದ ‘ಬ್ಯಾಟಲ್ ನಾಟ್ ಓವರ್’ ಸಹ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

Related posts

ಸುಳ್ಯ: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿಟ್ಟವ ಪಶ್ಚಿಮ ಬಂಗಾಳದಲ್ಲಿ ಸೆರೆ?

ಕೊಟ್ಯಂತರ ಅಭಿಮಾನಿಗಳ ಗಮನ ಸೆಳೆದ ಯೂಟ್ಯೂಬರ್ ಸಿನಿಮಾ ಕ್ಷೇತ್ರಕ್ಕೂ ಎಂಟ್ರಿ!,ಸಿಂಪಲ್ ಹುಡುಗ ಡಾ.ಬ್ರೋ ಅಭಿನಯದ ಸಿನಿಮಾ ಯಾವುದು ಗೊತ್ತೆ??

ಪುತ್ತೂರು: ಚಿನ್ನದ ಸರ ಕಾಣೆಯಾಗಿದೆ ಎಂದು ಪೊಲೀಸ್ ದೂರು ಕೊಟ್ಟ ಅಜ್ಜಿಯ ದಿಂಬಿನ ಕೆಳಕ್ಕೇ ಇತ್ತು ಸರ..! ಎರಡು ದಿನ ಹುಡುಕಾಡಿದವರಿಗೆ ಸರ ಸಿಕ್ಕಿದ್ದು ಹೇಗೆ?!