ಸುಳ್ಯ

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸಂಗೀತ ಕ್ಲಾಸ್‌ ಆರಂಭ

ನ್ಯೂಸ್ ನಾಟೌಟ್ : ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನ.೨೫ರಂದು ಸಂಗೀತ ತರಗತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಮಾತನಾಡಿ “ಕಲಿಕೆ ಎಂಬುದು ನಿರಂತರವಾದುದಾಗಿದ್ದು ಪಠ್ಯ ಮತ್ತು ಪಠ್ಯೇತರ ಅಂಶಗಳನ್ನು ಒಳಗೊಂಡಿದೆ. ಅದರಲ್ಲಿ ಸಂಗೀತದ ಕಲಿಕೆ ವೈಜ್ಞಾನಿಕವಾಗಿ ರೂಪಿತವಾಗಿದೆ. ನಿರಂತರ ಅಭ್ಯಾಸದ ಜೊತೆಗೆ ಗಮನವಿಟ್ಟು ಕಲಿಯಬೇಕು. ಸಂಗೀತ ಶಿಕ್ಷಣ ಔಪಚಾರಿಕ ಶಿಕ್ಷಣಕ್ಕೆ ಎಂದಿಗೂ ಹೊರೆಯಾಗುವುದಿಲ್ಲ. ಕಲಿಕೆಗೆ ಗಮನ ಮತ್ತು ಗ್ರಹಿಕೆ ಬಹಳ ಮುಖ್ಯವಾದದ್ದು” ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಸಂಗೀತ ಶಿಕ್ಷಕಿ ಸಾಗರಿಕ , ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ , ಆಸಕ್ತ 40 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

ಸಂಪಾಜೆ: ಸ್ಕೂಟಿ-ಜೀಪ್ ಡಿಕ್ಕಿ, ಪಂಚಾಯತ್ ಸದಸ್ಯ ಪವಾಡ ಸದೃಶ ಪಾರು

ಸುಳ್ಯ: ಜ್ಯೋತಿ ಆಸ್ಪತ್ರೆಗೆ ಎರಡನೇ ಬಾರಿಗೆ ರಾಷ್ಟ್ರೀಯ ಮಾನ್ಯತೆ, 47 ವರ್ಷಗಳಿಂದ ನಿರಂತರ ಸೇವೆ

ಸುಳ್ಯ: ಬೆಳಗ್ಗೆ ಕೆಲಸಕ್ಕೆಂದು ಆಸ್ಪತ್ರೆಗೆ ಬಂದ ಮಗಳಿಗೆ ತಂದೆಯ ಶವ ಕಂಡು ಶಾಕ್, ಕೆವಿಜಿ causality ವಿಭಾಗದಲ್ಲಿ ನಡೆಯಿತೊಂದು ಮನಕಲಕೊ ಘಟನೆ