ಕೊಡಗು

ಚೆಂಬು ಗ್ರಾಮದಲ್ಲಿ ಭೂಕಂಪನ ಮಾಪನ ಅಳವಡಿಕೆ

ನ್ಯೂಸ್ ನಾಟೌಟ್: ಕೊಡಗು ಹಾಗೂ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಸಂಭವಿಸಿದ ಭೂಕಂಪಗಳಿಗೆ ಕೇಂದ್ರ ಬಿಂದುವಾಗಿರುವ ಚೆಂಬು ಗ್ರಾಮದಲ್ಲಿ ಸಿಸ್ಮೋಗ್ರಾಫ್ (ಭೂಕಂಪನ ಮಾಪನ) ಅಳವಡಿಸಲು ಕೊಡಗು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಇದರಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಅವರು ಚೆಂಬು ಗ್ರಾಮಕ್ಕೆ ಭೇಟಿ ನೀಡಲಿದ್ದು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಮೂಲಗಳ ಪ್ರಕಾರ ಚೆಂಬು ಗ್ರಾಮದ ಕೂಡಡ್ಕ ಎಂಬಲ್ಲಿ ಸಿಸ್ಮೋಗ್ರಾಫ್ ಅಳವಡಿಕೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಸ್ಮೋಗ್ರಾಫ್ ಅಳವಡಿಕೆಯಾದರೆ ಭೂಮಿ ಕಂಪಿಸುವ ಸಂದರ್ಭದಲ್ಲಿ ಅದರ ತೀವ್ರತೆ ಎಷ್ಟಿತ್ತು ಎನ್ನುವುದು ತಕ್ಷಣಕ್ಕೆ ದಾಖಲಾಗಿ ಸಿಗುತ್ತದೆ. ಮಂಗಳವಾರ ಬೆಳಗ್ಗೆ ಹಾಗೂ ಸಂಜೆ ಚೆಂಬು ಗ್ರಾಮದ ಕೇಂದ್ರವಾಗಿ ಭೂಕಂಪನವಾಗಿತ್ತು. ಬೆಳಗ್ಗಿನ ಕಂಪನ ೩.೦ ತೀವ್ರತೆ ಹೊಂದಿದ್ದರೆ ಸಂಜೆಯ ವೇಳೆ ಸಂಭವಿಸಿದ ಕಂಪನ ೧.೮ರಷ್ಟು ತೀವ್ರತೆ ಹೊಂದಿತ್ತು.

Related posts

ಮಡಿಕೇರಿ :ರಸ್ತೆ ಬದಿಯಲ್ಲಿ ಯುವಕನೊಬ್ಬನ ಸಂಶಯಾಸ್ಪದ ಸಾವು,ಹಲ್ಲೆಗೊಳಗಾಗಿ ಮೃತಪಟ್ಟಿರುವ ಶಂಕೆ

ಅಯ್ಯೋ.. ಮೈಸೂರು ಪಾಕ್‌, ಲಾಡಿನಲ್ಲಿ ಹುಳ..ಹುಳ..!

ಕೊಡಗು: ಮರಿಯೊಂದಿಗಿದ್ದ ಕಾಡಾನೆಯಿಂದ ಕ್ಯಾಂಟೀನ್ ಮೇಲೆ ದಾಳಿ..! ಕ್ಯಾಂಟೀನ್ ನಡೆಸುತ್ತಿದ್ದ ದಂಪತಿ ಕೂದಲೆಳೆ ಅಂತರದಲ್ಲಿ ಪಾರು..!