ಕರಾವಳಿ

ಮದುವೆಯಾಗದ ಒಂಟಿ ಮಹಿಳೆಯರಿಗೂ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕಿದೆ: ಸುಪ್ರೀಂ 

ನ್ಯೂಸ್ ನಾಟೌಟ್: ಸುರಕ್ಷಿತ ಮತ್ತು ಕಾನೂನು ಪ್ರಕಾರ ಗರ್ಭಪಾತಕ್ಕೆ ಎಲ್ಲಾ ಮಹಿಳೆಯರು ಅರ್ಹರು ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಗರ್ಭಿಣಿಯಾಗಲು ಇಷ್ಟವಿಲ್ಲದ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ವಿವಾಹದ ಹಿನ್ನೆಲೆಯಲ್ಲಿ ಕಸಿದುಕೊಳ್ಳುವ ಹಕ್ಕಿಲ್ಲ ಎಂದು ಹೇಳಿದೆ.

ಮದುವೆಯಾಗದೆ ಒಂಟಿಯಾಗಿರುವ ಮಹಿಳೆಯರು ವೈದ್ಯಕೀಯ ಗರ್ಭಪಾತ ಕಾಯ್ದೆಗಳು ಮತ್ತು ನಿಯಮಗಳಡಿ ಗರ್ಭಿಣಿಯಾದ 24 ವಾರಗಳ ವರೆಗೂ ಗರ್ಭಪಾತದ ಹಕ್ಕನ್ನು ಹೊಂದಿರುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ವೈವಾಹಿಕ ಅತ್ಯಾಚಾರ ಒಳಗೊಂಡಂತೆ ಅತ್ಯಾಚಾರ ತಡೆಯುವುದು  ವೈದ್ಯಕೀಯ ಗರ್ಭಪಾತ ಕಾಯ್ದೆ ಉದ್ದೇಶವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ವ್ಯತ್ಯಾಸವು  ಕೃತಕ ಮತ್ತು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳುತ್ತದೆ. ವಿವಾಹಿತ ಮಹಿಳೆಯರು ಮಾತ್ರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬ ವರ್ಗೀಕರಣವನ್ನು ಇದು ಶಾಶ್ವತಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

Related posts

ಪೆರಾಜೆ:ಆನೆ ಬಂತೊಂದಾನೆ..!ಶಾಲಾ ಮಕ್ಕಳ ಓಮ್ನಿ ಪುಡಿಗೈದ ಕಾಡಾನೆ..!ಒಂಟಿ ಸಲಗನ ದರ್ಶನದಿಂದ ಕಂಗಾಲಾದ ಸ್ಥಳೀಯರು..!

ಬೈಕ್ ನಲ್ಲಿ ಡಬಲ್ ರೈಡ್ ನಿಷೇಧ ಯಾಕೆ ಗೊತ್ತಾ?

ಮಂಗಳೂರಿಗೆ ಹೋಗಿದ್ದ ವ್ಯಕ್ತಿ ನಾಪತ್ತೆ, ಬೆಳ್ಳಾರೆಯಲ್ಲಿ ಪ್ರತ್ಯಕ್ಷ