ಕ್ರೈಂ

ಹಾಡು ನಿಲ್ಲಿಸಿದ ಗಾನ ಕೋಗಿಲೆ, ಲತಾ ಮಂಗೇಶ್ಕರ್ ಇನ್ನಿಲ್ಲ

ಮುಂಬೈ: ಕಳೆದ ಕೆಲವು ದಿನಗಳಿಂದ ಕರೋನಾ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲತಾ ಮಂಗೇಶ್ಕರ್ (92) ನಿಧನರಾಗಿದ್ದಾರೆ. ಹಲವಾರು ಸಿನಿಮಾನಗಳಲ್ಲಿ ಹಾಡಿ ಭಾರತ ಸೇರಿದಂತೆ ವಿಶ್ವ ಸಿನಿ ಪ್ರಿಯರ ಮನ ಗೆದ್ದಿದ್ದ ಗಾನ ಕೋಗಿಲೆ ನಿಧನಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಲತಾ ಮಂಗೇಶ್ಕರ್ ಜನವರಿ 8 ರಂದು ಕರೋನಾ ಸೋಂಕಿಗೆ ತುತ್ತಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್ 28 ರಂದು ಇಂದೋರ್ ನಲ್ಲಿ ಜನಿಸಿದ್ದ ಲತಾ ಮಂಗೇಶ್ಕರ್ ಕ್ವೀನ್ ಆಫ್‌ ಮೆಲೋಡಿ ಎಂದೇ ಪ್ರಸಿದ್ಧರಾಗಿದ್ದರು. ಇವರ ಸಾಧನೆಗಾಗಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಸೇರಿದಂತೆ ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.

Related posts

ನರ್ಸರಿ ಶಾಲಾ ಕಟ್ಟಡ ದಿಢೀರ್ ಕುಸಿದದ್ದೇಗೆ..? ಭಾರಿ ಅವಘಡದಿಂದ ಮಕ್ಕಳು ಪಾರಾಗಿದ್ದೇಗೆ..?

ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ಮ್ಯಾನೇಜರ್..? ಕರಾವಳಿಯಲ್ಲೊಂದು ರಕ್ತ ಚರಿತ್ರೆ

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಐಟಿಐ ವಿದ್ಯಾರ್ಥಿ ಸಾವು