ರಾಜಕೀಯ

ಮುಖ್ಯಮಂತ್ರಿ ಪಟ್ಟಕ್ಕೆ ಸಿದ್ದರಾಮಯ್ಯ ಹೆಸರು ಅಂತಿಮ? ನಾಳೆಯೇ ಪ್ರಮಾಣ ವಚನ?

ನ್ಯೂಸ್ ನಾಟೌಟ್: ಕಾಂಗ್ರೆಸ್ ನಲ್ಲಿ ಇದ್ದ ಸಿಎಂ ಆಯ್ಕೆ ಗೊಂದಲ ಬಹುತೇಕ ಪರಿಹಾರಗೊಳ್ಳುವ ಮುನ್ಸೂಚನೆ ದೊರೆತಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿದೆ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದು ಬಂದಿದೆ.
ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ನಾಳೆಯೇ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಶುಕ್ರವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಾಳೆ ಪ್ರಮಾಣ ವಚನಕ್ಕೆ ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.

ಡಿಕೆ ಶಿವ ಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಕಳೆದ ಎರಡು ದಿನಗಳಿಂದ ಸಿಎಂ ಸ್ಥಾನಕ್ಕಾಗಿ ಸಾಕಷ್ಟು ಗೇಮ್ ಪ್ಲಾನ್ ಗಳು ನಡೆದಿವೆ. ಆದರೆ ಈ ಎಲ್ಲ ಗೊಂದಲಕ್ಕೆ ಹೈಕಮಾಂಡ್ ಇದೀಗ ತೆರೆ ಎಳೆದಿದೆ. ನಾಳೆ ಮಧ್ಯಾಹ್ನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಮಧ್ಯಾಹ್ನ ೩.೩೦ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಮನೆಯ ಮುಂದೆ ಇದೀಗ ಬಿಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ೭೦ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಪಂಜ: ಸುಳ್ಯದ ಕಾಂಗ್ರೆಸ್ ಅಭ್ಯರ್ಥಿಗೆ ದೊಣ್ಣೆ ತೋರಿಸಿ ಓಡಿಸಿದ ಕಾಂಗ್ರೆಸ್ ಮುಖಂಡ..!,ಚಪ್ಪಲಿ ಬಿಟ್ಟು ಓಡಿದರೇ ಕಾಂಗ್ರೆಸ್ ನಾಯಕ?

ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ಗೆ ಮಂಗಳೂರಲ್ಲಿ ಚಿಕಿತ್ಸೆ

“CM ಸಿದ್ದರಾಮಯ್ಯನವರೇ ಎಷ್ಟೇ ಹುಡುಕಾಡಿದ್ರೂ ಹೆಣ್ಣೇ ಸಿಕ್ತಿಲ್ಲ, ದಯವಿಟ್ಟು ‘ಕನ್ಯೆಭಾಗ್ಯ ಕೊಡಿ”, ಜಾಲತಾಣದಲ್ಲಿ ಏನಿದು ಯುವಕನ ವಿಚಿತ್ರ ಮನವಿ