ಬೆಂಗಳೂರುರಾಜಕೀಯ

ಮುಖ್ಯಮಂತ್ರಿಯಾದ ಖುಷಿಗೆ ಪತ್ನಿಯಿಂದ ಸಿದ್ದರಾಮಯ್ಯ ಅವರಿಗೆ ಸರ್ಪ್ರೈಸ್ ಗಿಫ್ಟ್‌!

ನ್ಯೂಸ್‌ನಾಟೌಟ್‌: ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಅವರ ಪತ್ನಿ ಪಾರ್ವತಿ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಸಂತೋಷ ಇಮ್ಮಡಿಯಾಗಿತ್ತು. ಇತ್ತ ಅವರ ಪತ್ನಿ ಪಾರ್ವತಿಯವರು ಸಿದ್ದರಾಮಯ್ಯ ಅವರಿಗೆ ಪ್ರೀತಿಯಿಂದ ಉಡುಗೊರೆಯಾಗಿ RADO ವಾಚ್ ನೀಡಿದ್ದಾರೆ.

ಪಾರ್ವತಿ ಅವರು ಉಡುಗೊರೆಯಾಗಿ ನೀಡಿದ ವಾಚ್‌ ಧರಿಸಿಕೊಂಡು ಸಿದ್ದರಾಮಯ್ಯ ಅವರು ರಾಜೀವ್ ಗಾಂಧಿ ಅವರ ಪುಣ್ಯತಿಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕೆಪಿಸಿಸಿ ಕಚೇರಿಯಲ್ಲಿರುವ ಇಂಧಿರಾಗಾಂಧಿ ಸಭಾಂಗಣದಲ್ಲಿ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಪುಣ್ಯ ತಿಥಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹೊಸ ವಾಚ್ ಕಟ್ಟಿಕೊಂಡು ಬಂದಿದ್ದರು. ಆಕರ್ಷಕವಾಗಿ ಕಾಣಿಸುತ್ತಿದ್ದ ವಾಚ್​ ನೋಡಿ ಡಿಕೆಶಿ ಪ್ರಶ್ನಿಸಿದ್ದಾರೆ. ಈ ವೇಳೆ ಸಿಎಂ ಆದ ಕಾರಣಕ್ಕೆ ಪತ್ನಿ ವಾಚ್ ಉಡುಗೊರೆಯಾಗಿ ನೀಡಿರುವುದಾಗಿ ಡಿಕೆಶಿ ಹಾಗೂ ಎಂ.ಬಿ. ಪಾಟೀಲ್ ಅವರಲ್ಲಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

Related posts

ಮನೆ ಕ್ಲೀನ್ ಮಾಡೋ ವೇಳೆ ಅವಘಡ: 5ನೇ ಮಹಡಿಯಿಂದ ಕಾಲು ಜಾರಿ ಕೆಳಗೆ ಬಿದ್ದು ಗೃಹಿಣಿ ಮೃತ್ಯು; ಆಗಿದ್ದೇನು?

ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ‘ಚಿನ್ನಾರಿಮುತ್ತ’ ಎಂಟ್ರಿ,ಬಾಮೈದ ರಕ್ಷಿತ್ ಗೆಲುವಿಗೆ ಮುಂದಾದ ನಟ ವಿಜಯ್ ರಾಘವೇಂದ್ರ

ಜುಲೈ 23ರಂದು 2024-25ರ ಕೇಂದ್ರ ಬಜೆಟ್ ಮಂಡನೆ, ಎನ್.ಡಿ.ಎ ಕೂಟದ ಮೊದಲ ಬಜೆಟ್ ಬಗ್ಗೆ ಹಲವು ನಿರೀಕ್ಷೆ..!