ಕರಾವಳಿರಾಜಕೀಯ

ಬಜೆಟ್‌ನಲ್ಲಿ CM ಸಿದ್ದು ಸಿಹಿ ಸುದ್ದಿ, ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ವಿಮಾನ ರನ್‌ವೇ ನಿರ್ಮಾಣ ಘೋಷಣೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರಿನ ಜನರಿಗೆ ಈ ಸಲ ಬಜೆಟ್‌ನಲ್ಲಿ ಸಿಹಿ ಸುದ್ದಿಯನ್ನು ಪ್ರಕಟಿಸಲಾಗಿದೆ. ಪ್ರವಾಸೋದ್ಯಮ ಹಾಗೂ ವಿಪತ್ತು ನಿರ್ವಹಣಾ ಸಮಯದಲ್ಲಿ ನೆರವಾಗುವ ಉದ್ದೇಶದಿಂದ ಏರ್ ಸ್ಟ್ರಿಪ್ ನಿರ್ಮಿಸುವುದಕ್ಕೆ ನಿರ್ಧರಿಸಲಾಗಿದೆ.

ಏರ್‌ಸ್ಟ್ರಿಪ್ ಎಂದರೆ ವಿಮಾನ ನಿಲ್ದಾಣ ಅಥವಾ ಮಿನಿ ವಿಮಾನ ನಿಲ್ದಾಣ ಅಲ್ಲ. ಅದು ಕೇವಲ ರನ್‌ವೇ ಆಗಿರುತ್ತದೆ. ವಿಮಾನ ಇಲ್ಲಿ ಟೇಕ್‌ಆಫ್ ಮತ್ತು ಲ್ಯಾಂಡ್‌ ಆಗುವುದಕ್ಕೆ ಅವಕಾಶ ಇರುತ್ತದೆ. ಪ್ರವಾಸಿಗರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಹೋಗುವುದು ಹಾಗೂ ತುರ್ತು ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ಈ ರನ್‌ವೇಗಳು ಅತ್ಯಂತ ಸಹಕಾರಿಯಾಗಲಿದೆ. ಸಿದ್ಧರಾಮಯ್ಯ ನೇತೃತ್ವದ ನೂತನ ಸರ್ಕಾರದ ಮೊದಲ ಬಜೆಟ್ ನಲ್ಲಿ ಈ ಯೋಜನೆಯನ್ನು ಘೋಷಿಸಿರುವುದು ವಿಶೇಷ.

Related posts

ಸುಳ್ಯ:ರಸ್ತೆ ಬದಿಯಲ್ಲಿ ಹೋಗುತ್ತಿದ್ದಾಗ ಯಮರೂಪದಲ್ಲಿ ಬಂದ ಕಾರು..!, ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ದುರಂತ ಅಂತ್ಯ

ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿ 78ನೇ ಜಯಂತ್ಯೋತ್ಸವ:ಸುಳ್ಯದಿಂದ ೨೦ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಕರ್ನಾಟಕವನ್ನು ನಂಬರ್‌ ಒನ್‌ ಮಾಡುವುದೇ ಬಿಜೆಪಿ ಗುರಿ: ನರೇಂದ್ರ ಮೋದಿ