ಕ್ರೀಡೆ

ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಹುಡುಗಿ ಕಂಡು ಮೈಮರೆತ ಕ್ರಿಕೆಟಿಗ ಗಿಲ್..! ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಇಲ್ಲಿದೆ ವೀಕ್ಷಿಸಿ

ನ್ಯೂಸ್ ನಾಟೌಟ್ : ಪ್ರಸಕ್ತ ಐಪಿಎಲ್ ಕೂಟದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಗುಜರಾತ್​ ನಡುವಿನ ಪಂದ್ಯದ ವೇಳೆ ಶುಭ್ ಮನ್ ಗಿಲ್ ಹುಡುಗಿಯೊಬ್ಬಳನ್ನು ಕಂಡು ಮೈಮರೆತ ಘಟನೆ ನಡೆದಿದೆ.

ಶುಭಮನ್​ ಗಿಲ್(Shubman Gill)​ ಅವರು ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಜೊಲ್ಲು ಸುರಿಸಿದ ವಿಡಿಯೊ ವೈರಲ್ ಆಗಿದೆ. ಡೆಲ್ಲಿ ತಂಡ ಗೆಲುವು ಸಾಧಿಸಿದನ್ನು ಕಂಡು ಗ್ಯಾಲರಿಯಲ್ಲಿದ್ದ ಹುಡುಗಿಯೊಬ್ಬಳು ಚಪ್ಪಾಳೆ ತಟ್ಟುತ್ತಾ ತಂಡಕ್ಕೆ ಅಭಿನಂದಿಸಿದ್ದಾಳೆ. ಇದೇ ವೇಳೆ ಗಿಲ್​ ಈ ಹುಡುಗಿಯನ್ನು ಕಂಡು ವಾಹ್​… ಎಂಬ ಸನ್ನೆ ಮಾಡಿದರು. ಈ ದೃಶ್ಯ ಪಂದ್ಯದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಂದ್ಯ ಸೋತರೂ ಈ ಹುಡುಗಿಯನ್ನು ಕಂಡ ಗಿಲ್​ ಎಲ್ಲ ಚಿಂತೆಯನ್ನು ಮರೆತರು. ಗಿಲ್​ ಅವರ ಈ ವಿಡಿಯೊ ಕಂಡ ಕೆಲ ನೆಟ್ಟಿಗರು ಸಾರಾ ತೆಂಡೂಲ್ಕರ್​ ಕಂಡರೆ ನಿಮಗೆ ಮಾರಿ ಹಬ್ಬ ಖಂಡಿತ ಎಂದು ತಮಾಷೆಯ ಕಮೆಂಟ್​ ಮಾಡಿದ್ದಾರೆ. ಪಂದ್ಯಕ್ಕೂ ಮುನ್ನವೇ ನಿಮ್ಮ ತಂಡದ ಆಟಗಾರರು ಈ ಹುಡುಗಿಯನ್ನು ಕಂಡಿರಬೇಕು, ಹೀಗಾಗಿ ಆಟದಲ್ಲಿ ಏಕಾಗ್ರತೆ ಕಳೆದುಕೊಂಡು ಕಳಪೆ ಪ್ರದರ್ಶನ ತೋರಿ ಸೋಲು ಕಂಡಿದ್ದು ಎಂದು ಕಾಲೆಳೆದಿದ್ದಾರೆ. ಈ ವಿಡಿಯೊಗೆ ‘ಮೆನ್​ ವಿಲ್​ ಬಿ ಮೆನ್​” ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

Related posts

ಹಿಂದೂ ಕ್ರಿಕೆಟಿಗನ ಮನೆಗೆ ಬೆಂಕಿ..? ಶೇಖ್ ಹಸೀನಾ ಬೆಂಬಲಿಗರಿಗೆ ನಡುಕ..!

ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ದ್ವಿತೀಯ, ಕಾಲೇಜು ವತಿಯಿಂದ ಅಭಿನಂದನೆ

ಐಪಿಎಲ್‌ ಮೆಗಾ ಹರಾಜಿನಲ್ಲಿ ಸ್ಟಾರ್‌ ಆಟಗಾರನ್ನೇ ಕೈಬಿಟ್ಟ ಪ್ರಾಂಚೈಸಿಗಳು..! ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡ ರಿಷಬ್ ಪಂತ್..!