ಕರಾವಳಿ

ಶ್ರದ್ಧಾ ಮರ್ಡರ್ ಮಿಸ್ಟರಿಯನ್ನು ಪೊಲೀಸರು ಭೇದಿಸಿದ್ದು ಹೇಗೆ?

ನ್ಯೂಸ್ ನಾಟೌಟ್ : ಶ್ರದ್ಧಾ ವಾಲ್ಕರ್‌ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ತನ್ನ ಸಂಗಾತಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಕ್ರೂರಿ ಅಫ್ತಾಬ್ ಅಮೀನ್ ಪೂನಾವಾಲಾ ಮುಖದಲ್ಲಿ ಸ್ವಲ್ಪವೂ ಪಶ್ಚಾತ್ತಾಪ ಇರಲಿಲ್ಲ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಆತ ಹೆಚ್ಚು ಆತ್ಮವಿಶ್ವಾಸದಿಂದ ಕಾಣುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಯನ್ನು ‘ಚತುರ ಬುದ್ಧಿವಂತ’ ಎಂದು ಬಣ್ಣಿಸಿರುವ ಪೊಲೀಸರು, ಆತನಿಗೆ ಹಿಂದಿ ಗೊತ್ತಿದ್ದರೂ ವಿಚಾರಣೆ ವೇಳೆ ಇಂಗ್ಲಿಷಿನಲ್ಲಿ ಸರಾಗವಾಗಿ ಉತ್ತರಿಸುತ್ತಿದ್ದ. ಅದೃಷ್ಟದಿಂದ ಆತ ಈ ಪ್ರಕರಣದಿಂದ ಪಾರಾಗಬಹುದೆಂದು ಭಾವಿಸಿದ್ದ, ಆದರೆ ಅಷ್ಟರಲ್ಲಿ ಪೊಲೀಸರು ಆತನ ಮನೆ ಬಾಗಿಲು ತಟ್ಟಿದರು. ಶ್ರದ್ಧಾ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆರೋಪಿ ಸಕ್ರಿಯವಾಗಿದ್ದುದೇ ಶ್ರದ್ಧಾ ನಿಗೂಢ ನಾಪತ್ತೆ– ಭೀಕರ ಹತ್ಯೆಯ ರಹಸ್ಯ ಭೇದಿಸಲು ನೆರವಾಯಿತು ಎನ್ನುತ್ತಾರೆ ತನಿಖಾಧಿಕಾರಿಗಳು. ಈ ಪ್ರಕರಣದ ತನಿಖೆಯಲ್ಲಿ ಮೈಜುಮ್ಮೆನಿಸುವ ಭಯಾನಕ ಸಂಗತಿಗಳು ಒಂದೊಂದೇ ಹೊರಬೀಳುತ್ತಿವೆ. ಇನ್ನೂ ಪತ್ತೆಯಾಗದಿರುವ ಶ್ರದ್ಧಾ ಶವದ ಭಾಗಗಳಿಗೆ ಪೊಲೀಸರ ಶೋಧ ಮುಂದುವರಿದಿದೆ.

Related posts

ಸುಳ್ಯ:ಸ್ನೇಹ ಶಾಲೆಯಲ್ಲಿ ಯುವದಿನಾಚರಣೆ,ಪರಿಸರ ಸಂರಕ್ಷಣೆಯ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

ಮಡಿಕೇರಿ: ಕೊಡಗಿನ ಕೆಲವೆಡೆ ಸೂರ್ಯನ ಸುತ್ತ ಗೋಚರವಾದ ಉಂಗುರದ ಮಾದರಿ..!,ಸೂರ್ಯ ದೇವ’ನ ಸುತ್ತ ವಿವಿಧ ವರ್ಣಗಳ ಉಂಗುರ ದರ್ಶನದಿಂದ ಪುಳಕಿತರಾದ ಜನ

ಸುಳ್ಯ:ಹೊಟೇಲೊಂದರ ಬಳಿ ಆಕಸ್ಮಿಕ ಬೆಂಕಿ