ಮುಂಬೈ: ಮದುವೆಯಾಗಿ ಬರೋಬ್ಬರಿ 12 ವರ್ಷಗಳ ನಂತರ ನಟಿ ಶಿಲ್ಪಾ ಶೆಟ್ಟಿ ದಂಪತಿ ಪ್ರತ್ಯೇಕವಾಗಿರಲು ಚಿಂತನೆ ನಡೆಸಿದ್ದಾರೆ. ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣದಲ್ಲಿ ರಾಜ್ ಕುಂದ್ರಾ ಮುಂಬೈ ಪೊಲೀಸರ ವಶವಾಗಿರುವ ಬೆನ್ನಲ್ಲೇ, ಪತಿಯಿಂದ ದೂರವಾಗಲು ನಟಿ ಶಿಲ್ಪಾ ಶೆಟ್ಟಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಚೆಲುವೆಯ ನಿರ್ಧಾರಕ್ಕೆ ಕಾರಣಗಳೇನು?
ಹಣಕ್ಕಾಗಿ ಪತಿ ಮಾಡುತ್ತಿದ್ದ ಕೆಲಸಗಳು ಶಿಲ್ಪಾ ಶೆಟ್ಟಿ ಮತ್ತು ಅವರ ಕುಟುಂಬಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಅದರಲ್ಲೂ ಈ ಪ್ರಕರಣ ತಮ್ಮ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವುದು ಖಚಿತ ಎಂಬ ನಿರ್ಧಾರಕ್ಕೆ ಬಂದಿರುವ ಶಿಲ್ಪಾ, ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದಾರೆ ಎಂದು ಬಾಲಿವುಡ್ ಹಂಗಾಮ ಎಂಬ ವೆಬ್ ಸೈಟ್ ವರದಿ ಮಾಡಿದೆ.
ಮದುವೆಯಾಗಿ 13 ವರ್ಷ:
2009ರಲ್ಲಿ ರಾಜ್ ಕುಂದ್ರಾರನ್ನು ಮದುವೆಯಾಗಿದ್ದು 13 ವರ್ಷಗಳು ಸಂದಿವೆ. ಇದೀಗ ಶಿಲ್ಪಾಗೆ ವಿಹಾನ್ ಮತ್ತು ಸಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಹೇಗಿದ್ದರೂ ಪತಿಯ ಕೇಸ್ ಸದ್ಯಕ್ಕೆ ಮುಗಿಯುವುದಿಲ್ಲ. ಹೀಗಾಗಿ ಪತಿ ಜೊತೆಗಿದ್ದರೆ ತಾವೂ ಕಿರಿಕಿರಿ ಅನುಭವಿಸುವ ಜೊತೆಗೆ ಮಕ್ಕಳೂ ಸಮಸ್ಯೆ ಎದುರಿಸಬೇಕಾಗುತ್ತದೆ. ಮಾತ್ರವಲ್ಲದೇ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸಂಪಾದನೆ ಮಾಡುತ್ತಿರುವ ಕಾರಣ, ಪ್ರತ್ಯೇಕವಾಗಿರುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಶಿಲ್ಪಾ ಬಂದಿದ್ದಾರೆ ಎನ್ನಲಾಗಿದೆ.