ಕ್ರೈಂ

ಪಿಎಚ್ ಡಿ ಮಾಡೋದು ಬೇಡ ಅಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳು ಸುಂದರ ಹುಡುಗಿ

966

ವಿಜಯನಗರ: ಪಿಎಚ್ ಡಿ ಮಾಡೋದು ಬೇಡ ಅಂತ ಪೋಷಕರು ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ನಡೆದಿದೆ. ಬಿ.ಇಡ್ ವ್ಯಾಸಂಗ ಮಾಡುತ್ತಿರುವ ಯು.ಎನ್. ಪೂಜಾ(24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪೂಜಾ ಎಂ.ಎಸ್ಸಿ ಮುಗಿಸಿಕೊಂಡು ಬಿ.ಇಡ್ ಮಾಡುತ್ತಿದ್ದಳು. ಈಗ ಪಿಎಚ್ ಡಿ ಮಾಡುವುದಾಗಿ ತಂದೆ ಮುಂದೆ ತನ್ನ ಅಭಿಪ್ರಾಯ ತಿಳಿಸಿದ್ದಾಳೆ. ಅದಕ್ಕೆ ತಂದೆ ನಾಗರಾಜ್, ಈಗ ಬೇಡ ಎಂದು ಹೇಳಿದ್ದಾರೆ. ಬೇಸರದಿಂದ ಪೂಜಾ ತನ್ನ ರೂಂ ಗೆ ತೆರಳಿದ್ದಾಳೆ. ಎಷ್ಟು ಗಂಟೆಯಾದರೂ ರೂಂನಿಂದ ಪೂಜಾ ಹೊರಗಡೆ ಬಂದಿಲ್ಲ. ಬಳಿಕ ಬಾಗಿಲು ಒಡೆದು ನೋಡಿದಾಗ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮಂಗಳೂರು: ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿಯ ಕೊಲೆ ಕೇಸ್ ಗೆ ಸಂಬಂಧಿಸಿ 20 ಆರೋಪಿಗಳು ಅರೆಸ್ಟ್..! ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget