ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಶಾರುಖ್​​ ಖಾನ್ ವೈಷ್ಣೋದೇವಿ ಸನ್ನಿಧಿಗೆ ಬಂದದ್ದೇಕೆ? ಬಾಲಿವುಡ್​ ನಟ ಈ ದೇಗುಲಕ್ಕೆ ಮೂರನೇ ಬಾರಿ ಭೇಟಿ ನೀಡಲು ಕಾರಣವೇನು?

ಈ ದೇಗುಲಕ್ಕೂ ಖಾನ್ ಗೂ ಇರೋ ನಂಟೇನು?

ನ್ಯೂಸ್ ನಾಟೌಟ್: ಬಾಲಿವುಡ್​ ಕಿಂಗ್​ ಖಾನ್​​ ಶಾರುಖ್​ ಖಾನ್​ ಅಭಿನಯದ ಬಹುನಿರೀಕ್ಷಿತ ಡಂಕಿ ಸಿನಿಮಾ ಇದೇ ಡಿಸೆಂಬರ್ 21 ರಂದು ತೆರೆಕಾಣಲಿದೆ. ಸಿನಿಮಾ ಪ್ರಚಾರ ಜೋರಾಗೇ ನಡೆಯುತ್ತಿದ್ದು, ಚಿತ್ರ ತೆರೆಗಪ್ಪಳಿಸೋ ಮುನ್ನ ನಾಯಕ ನಟ ಶಾರುಖ್ ಖಾನ್ ಪವಿತ್ರ ಕ್ಷೇತ್ರಕ್ಕೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಇಂದು (ಡಿ.12) ಬೆಳಗ್ಗೆ ಜಮ್ಮುವಿನ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲದಲ್ಲಿ ನಟ ಭೇಟಿ ನೀಡಿದ್ದರು. 2023ರಲ್ಲಿ ಪವಿತ್ರ ಕ್ಷೇತ್ರಕ್ಕೆ ಬಾಲಿವುಡ್​ ನಟ ಮೂರನೇ ಬಾರಿ ಭೇಟಿ ಕೊಟ್ಟಿದ್ದಾರೆ. ಈ ವರ್ಷದ ಬ್ಲಾಕ್​​​ಬಸ್ಟರ್ ಚಿತ್ರಗಳಾದ ಪಠಾಣ್ ಮತ್ತು ಜವಾನ್ ಬಿಡುಗಡೆಗೂ ಮುನ್ನ ಜನಪ್ರಿಯ ನಟ ಈ ಪವಿತ್ರ ದೇಗುಲಕ್ಕೆ ಭೇಟಿ ನೀಡಿದ್ದರು.

ತಮ್ಮ ಸಿನಿಮಾಗಳ ಬಿಡುಗಡೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡುತ್ತಾರೆ ಮತ್ತು ಈ ದೇವಿಯ ಆಶಿರ್ವಾದದಿಂದ ಯಶಸ್ಸು ಕಂಡಿರುವುದಾಗಿ ನಂಬಿದ್ದಾರೆ ಎನ್ನಲಾಗಿದೆ.
ಡಂಕಿ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ನಟಿಸಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 21ರಂದು ಪ್ರದರ್ಶನಗೊಳ್ಳಲಿದೆ.

Related posts

ಸಂಪೂರ್ಣ ಹೆಗಡೆ ನೇತೃತ್ವದಲ್ಲಿ ಬಹರೇನ್ ಗೆ ಹೊರಟ ಭಾರತ ಮಹಿಳಾ ಥ್ರೋ ಬಾಲ್ ತಂಡ, ಗೆದ್ದು ಬಾ ಭಾರತ

ರಷ್ಯಾ ದಾಳಿಯ ಬಳಿಕ ಮೊದಲ ಬಾರಿಗೆ ಉಕ್ರೇನ್‌ ಗೆ ಭೇಟಿ ನೀಡಲಿರುವ ಮೋದಿ..! ಇಲ್ಲಿದೆ ಸಂಪೂರ್ಣ ಮಾಹಿತಿ

Bike taxi: ಪೆಟ್ರೋಲ್‌ ಖಾಲಿಯಾದ್ರೂ ಬೈಕ್‌ನಿಂದ ಇಳಿಯದ ಗ್ರಾಹಕ..! ಗ್ರಾಹಕನ ಸಮೇತ ದೂಡಿಕೊಂಡೇ ನಡೆದ ಚಾಲಕ