ರಾಜಕೀಯ

ಶಕ್ತಿ ಗ್ಯಾರಂಟಿ ಯೋಜನೆ ಉದ್ಘಾಟಿಸಿದ ಏಕೈಕ ಬಿಜೆಪಿ ಶಾಸಕ! ಭಾಷಣದ ವೇಳೆ ಮಾತಿನ ಚಕಮಕಿ..!

ನ್ಯೂಸ್ ನಾಟೌಟ್ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅನುಪಸ್ಥಿತಿಯಲ್ಲಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಶಾಸಕ ಎಸ್ಎನ್ ಚನ್ನಬಸಪ್ಪ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಬಿಜೆಪಿಯ ಏಕೈಕ ಶಾಸಕ ಎಂಬ ಮಾತು ಕೇಳಿಬರುತ್ತಿದೆ.

ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಚನ್ನಬಸಪ್ಪ, ” ರಾಜ್ಯ ಸರ್ಕಾರ ವಿಶೇಷವಾದ ಸೌಲಭ್ಯ ಹೆಣ್ಣುಮಕ್ಕಳಿಗೆ ನೀಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರೋದಕ್ಕೆ ನಾನು ಹಾರ್ದಿಕ ಅಭಿನಂದನೆ ಸಲ್ಲಿಸುತ್ತೇನೆ. ಸುರಕ್ಷಿತ ಪ್ರಯಾಣ ಮಾಡಬೇಕು, ಸರ್ಕಾರಕ್ಕೆ ಸವಾಲುಗಳಿವೆ, ಸಮಸ್ಯೆಗಳೂ ಇವೆ. ಇವನ್ನೆಲ್ಲಾ ಸರಿ ಮಾಡಿಕೊಂಡು ಹೋಗಬೇಕು” ಎಂದರು.

ಈ ಯೋಜನೆ ಕೇವಲ ಎರಡು ವರ್ಷಕ್ಕೆ ಎಂದು ಹೇಳಿದ್ದಾರೆ. ನನಗ್ಯಾಕೋ ಅನುಮಾನ, ಐದು ವರ್ಷದ ಸರ್ಕಾರ ಯೋಜನೆಯನ್ನೂ ಐದು ವರ್ಷ ಮಾಡಬಹುದಿತ್ತು. ಎರಡೇ ವರ್ಷ ಈ ಯೋಜನೆ ಅಂದರೆ ಸರ್ಕಾರ ಕೂಡ ಎರಡೇ ವರ್ಷ ಎಂಬ ಅರ್ಥ ಬರುತ್ತೆ ಎಂದು ಕಾಂಗ್ರೆಸ್ ಮಿರುದ್ಧ ಕಾಂಗ್ರೆಸ್ ಕಾರ್ಯಕ್ರಮದಲ್ಲೇ ವಾಗ್ದಾಳಿ ನಡೆಸಿದರು.
ಈ ವೇಳೆ ಕಾಂಗ್ರೆಸ್ ನಾಯಕರು ಎದ್ದು ನಿಂತು ಶಾಸಕರ ಮಾತನ್ನ ಅಲ್ಲಗಳೆದು ಎಲ್ಲಿಯೂ ಕಾಂಗ್ರೆಸ್ ಎರಡು ವರ್ಷ ಎಂದು ಹೇಳಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಗೊಂದಲ ಉಂಟಾಗಿ ಸಮಾದಾನ ಪಡಿಸಿ ಮತ್ತೆ ಮಾತು ಶುರುಮಾಡಿದ ಶಾಸಕ, ಕೆಎಸ್ ಆರ್ ಟಿಸಿ ಬಸ್ ಸೇವೆಯನ್ನ ಜನರಿಗೆ ಸಮರ್ಪಕವಾಗಿ ಮುಟ್ಟಬೇಕು, ಪ್ರತಿಯೊಬ್ಬರಿಗೂ ತಲುಪಬೇಕು. ಶಿವಮೊಗ್ಗದಲ್ಲಿ ರಾಜಕಾರಣ ಮಾಡಿದ್ದೇವೆ ಆದರೆ ಅಭಿವೃದ್ಧಿ ವಿಷಯದಲ್ಲಿ ನಾವು ಎಂದೂ ರಾಜಕಾರಣ ಮಾಡಿಲ್ಲ ಎಂದರು.

Related posts

ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು..! ಸ್ವಾಮೀಜಿ ಹೇಳಿಕೆಗೆ ಪರಂ ಗರಂ..?

ವಿರಾಜಪೇಟೆಯಲ್ಲಿ ಕಾಂಗ್ರೆಸ್ ಗೆ ಗೆಲುವು

ಸಂಸದ ಪ್ರಜ್ವಲ್​ ರೇವಣ್ಣನ ಸರ್ಕಾರಿ ನಿವಾಸಕ್ಕೆ ಬೀಗ ಜಡಿದ ಅಧಿಕಾರಿಗಳು, ಸಂತ್ರಸ್ತೆಯ ಸಮ್ಮುಖದಲ್ಲಿ ರಾತ್ರಿ ಮಹಜರು