ದೇಶ-ಪ್ರಪಂಚ

ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಪಾರ್ಥೀವ ಶರೀರಕ್ಕೆ ನಟ ಶಾರುಖ್ ಉಗಿದರೇ..?

ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಪಾರ್ಥೀವ ಶರೀರಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಉಗುಳಿದ್ದಾರೆ ಅನ್ನುವ ವಿಚಾರಕ್ಕೆ ಪುಷ್ಠಿ ನೀಡುವಂತಹ ವಿಡಿಯೋವೊಂದು ವೈರಲ್ ಆಗಿದೆ.

ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಭಾನುವಾರ (ಫೆ.6) ಸಂಜೆ ಅಂತ್ಯಕ್ರಿಯೆ ನೆರವೇರಿತು. ಈ ಸಂದರ್ಭದಲ್ಲಿ ನಟ ಶಾರುಖ್​ ಖಾನ್​ ನಡೆದುಕೊಂಡ ರೀತಿ ಕೆಲವರಿಗೆ ಅಚ್ಚರಿ ಮೂಡಿಸಿದೆ. ಮ್ಯಾನೇಜರ್​ ಪೂಜಾ ದದ್ಲಾನಿ​ ಜೊತೆ ಬಂದ ಅವರು ಲತಾಜೀ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು. ಅದರ ವಿಡಿಯೋ ಕೂಡ ವೈರಲ್​ ಆಗಿದೆ. ಅಂತಿಮ ನಮನ ಸಲ್ಲಿಸುವ ವೇಳೆ ಲತಾ ಮಂಗೇಶ್ಕರ್​ ಅವರ ಪಾರ್ಥಿವ ಶರೀರದ ಮೇಲೆ ಶಾರುಖ್​ ಉಗಿದರು ಎಂಬ ಆರೋಪವನ್ನು ಕೆಲವರು ಹೊರಿಸಿದ್ದಾರೆ. ಈ ಕುರಿತಂತೆ ಚರ್ಚೆ ಶುರುವಾಗಿದೆ.

ಲತಾ ಮಂಗೇಶ್ಕರ್​ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರುಖ್​ ಖಾನ್​ ಅವರು ಮಾಸ್ಕ್​ ಧರಿಸಿದ್ದರು. ಲೆಜೆಂಡರಿ ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥನೆ (ದುವಾ) ಮಾಡಿದರು. ಬಳಿಕ ಮಾಸ್ಕ್​ ತೆಗೆದು  ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರುಖ್​ ಖಾನ್​ ಉಗಿದರು ಎಂದು ಕೆಲವರು ಆರೋಪಿಸಿದ್ದಾರೆ.

Related posts

ನನ್ನ ಮಕ್ಕಳ ತಂಟೆಗೆ ಬಂದ್ರೆ ಹುಷಾರ್..!,ಮಕ್ಕಳನ್ನು ಬೇಟೆಯಾಡಲು ಬಂದ ಚಿರತೆಯ ಬೆವರಿಳಿಸಿದ ಮುಳ್ಳುಹಂದಿ..!ವೈರಲ್ ವಿಡಿಯೋ ವೀಕ್ಷಿಸಿ

ಟೀಂ ಇಂಡಿಯಾ(Team India) ಪ್ರವೇಶಿಸಿದ 21 ವರ್ಷದ ಬ್ಯಾಟ್ಸ್‌ಮನ್, ಧೂಳೆಬ್ಬಿಸಲು ರೆಡಿಯಾದ ಧೋನಿ(Dhoni) ಅಭಿಮಾನಿ ..!

14 ವರ್ಷದ ಬುಡಕಟ್ಟು ಹುಡುಗಿಯ ಮೇಲೆ ಸಂಬಂಧಿಕನಿಂದ ಅತ್ಯಾಚಾರ! ಕಾಡಿನಲ್ಲಿ ಸಿಕ್ಕ ಕಾರು ಪ್ರಕರಣಕ್ಕೆ ನೀಡಿತ್ತು ರೋಚಕ ತಿರುವು!