ಕರಾವಳಿ

ಅನ್ಯಕೋಮಿನ ಯುವಕನಿಂದ ನರ್ಸಿಂಗ್ ವಿದ್ಯಾರ್ಥಿನಿಗೆ ಗುಪ್ತಾಂಗ ಸ್ಪರ್ಶ

ನ್ಯೂಸ್ ನಾಟೌಟ್: ಅನ್ಯಕೋಮಿನ ಯುವಕ ನೊಬ್ಬ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಬಸ್ ನಲ್ಲಿ ಗುಪ್ತಾಂಗವನ್ನು ಸ್ಪರ್ಶಿಸಿ ಸಾರ್ವಜನಿಕವಾಗಿ ಸಿಕ್ಕಿಬಿದ್ದಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಸ್ವತಃ ಕಾಮುಕನನ್ನು ಪ್ರಯಾಣಿಕರು ಹಿಡಿದು ಇದೀಗ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಶನಿವಾರ ಸಂಜೆ ಘಟನೆ ನಡೆದಿದೆ. ಯುವತಿ ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಈತ ನೆಲ್ಯಾಡಿಯಿಂದ ಕೆಎಸ್‌ಆರ್ ಟಿಸಿ ಬಸ್ ಹತ್ತಿದ್ದ. ದಾರಿಯುದ್ಧಕ್ಕೂ ತನ್ನ ಗುಪ್ತಾಂಗವನ್ನು ಯುವತಿಗೆ ಟಚ್ ಮಾಡಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಕ್ಷಣ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ರಿಜಿಸ್ಟರ್ ಮಾಡಲು ನಿರ್ಧರಿಸಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಆದರೆ ಇದು ಗಂಭೀರ ಪ್ರಕರಣವಾಗಿದ್ದು ಎಫ್‌ಐಆರ್ ದಾಖಲಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Related posts

ಭಾರಿ ಮಳೆಗೆ ಕೊಚ್ಚಿ ಹೋದ ಸಂಪಾಜೆಯ ಸೇತುವೆ

ಪುತ್ತೂರು: ಕಾಂಗ್ರೆಸ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದಿರಾ? ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರಿಗೆ ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿದ್ಯಾಕೆ?

ಕೇರಳದಿಂದ ಕಡಬಕ್ಕೆ ಬಂದು 40 ಎಕರೆ ಸರ್ಕಾರಿ ಭೂಮಿಯನ್ನು ಗುಳುಂ ಮಾಡಿದ ಆಸಾಮಿ..! ಗೋಳಿತೊಟ್ಟು ಗ್ರಾಮ ಪಂಚಾಯತ್ ಪಿಡಿಒಗೆ ಹಿಗ್ಗಾಮುಗ್ಗಾ ಕ್ಲಾಸ್‌..!