ಕರಾವಳಿ

ಭಾರಿ ಮಳೆಗೆ ಕೊಚ್ಚಿ ಹೋದ ಸಂಪಾಜೆಯ ಸೇತುವೆ

890

ಸಂಪಾಜೆ: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಸಂಪಾಜೆಯ ಹೊಳೆ ಭರ್ತಿಯಾಗಿ ಜನ ಜೀವನಕ್ಕೆ ಅಡಚಣೆಯಾದ ಘಟನೆ ನಡೆದಿದೆ. ಎನ್‌ ಎಸ್ ದೇವಿ ಪ್ರಸಾದ್‌ ಅವರ ಮನೆಗೆ ಸಂಪರ್ಕ ಕಲ್ಪಿಸುವ ಮುಳುಗು ಸೇತುವೆ ಹಾಗೂ ರವೀಂದ್ರ ಸಂಪಾಜೆ ಅವರ ತೋಟಕ್ಕೆ ಹೋಗುವ ಕಾಲು ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ನೀರಿನ ಮಟ್ಟ ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏರಿಕೆ ಕಂಡು ಹಲವು ತೋಟಗಳಿಗೆ ನೀರು ನುಗ್ಗಿದೆ. ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೆರೆಯ ದಕ್ಷಿಣ ಕನ್ನಡ ಜಿಲ್ಲೆಗೂ ಮಳೆ ಬಿರುಸಾಗಿ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

See also  ಕ್ಯಾನ್ಸರ್ ರೋಗ ಬರುವುದು ಹೇಗೆ? ಅದನ್ನು ಹೇಗೆ ತಡೆಗಟ್ಟಬಹುದು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget