ದೇಶ-ಪ್ರಪಂಚ

‘ಸೆಕ್ಸ್’‌ ನನ್ನ ಸಾಮರ್ಥ್ಯದ ಗುಟ್ಟು, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೀಗೆ ಹೇಳಿದ್ಯಾಕೆ..?

ನ್ಯೂಸ್ ನಾಟೌಟ್: ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಟೀಕಾಸ್ತ್ರ ಬಳಸುತ್ತಿದ್ದ, ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಲ್ಲಿ ಸಿಲುಕಿರುವ ಟಿಎಂಸಿ ಉಚ್ಚಾಟಿತ ಸಂಸದೆ ಮಹುವಾ ಮೊಯಿತ್ರಾ ಅವರೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಟಿಎಂಸಿಯಿಂದ ಕೃಷ್ಣನಗರ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಹುವಾ ಮೊಯಿತ್ರಾ ಅವರು ಪತ್ರಕರ್ತರೊಬ್ಬರ ಪ್ರಶ್ನೆಗೆ, “ನನ್ನ ಸಾಮರ್ಥ್ಯದ ಗುಟ್ಟು ಎಂದರೆ ಸೆಕ್ಸ್”‌ ಎಂಬುದಾಗಿ ಹೇಳಿದ್ದಾರೆ ಎನ್ನಲಾದ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಇದು ವಿವಾದಕ್ಕೂ ಕಾರಣವಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ಮನೆಗೆ, ಪ್ರತಿ ಗ್ರಾಮಕ್ಕೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಹೀಗೆ, ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿರುವ ಮಹುವಾ ಮೊಯಿತ್ರಾ ಅವರಿಗೆ ಪತ್ರಕರ್ತರೊಬ್ಬರು “ನಿಮ್ಮ ಸಾಮರ್ಥ್ಯದ ಗಟ್ಟೇನು” ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಹುವಾ ಮೊಯಿತ್ರಾ ಅವರು, “ಸೆಕ್ಸ್‌ ನನ್ನ ಸಾಮರ್ಥ್ಯದ ಗುಟ್ಟು” ಎಂದಿದ್ದಾರೆ. ವಿಡಿಯೊ ವೈರಲ್ ಆಗುತ್ತಲೇ ಜನ ಟೀಕೆ ವ್ಯಕ್ತಪಡಿಸಿದ್ದಾರೆ. ಒಬ್ಬ ಸಂಸದೆಯಾಗಿ ಬಹಿರಂಗವಾಗಿ ಹೀಗೆ ಹೇಳುವುದು ತಪ್ಪು ಎಂದು ಖಂಡಿಸಿದ್ದಾರೆ. “ಮಹುವಾ ಮೊಯಿತ್ರಾ ಅವರನ್ನು ಸಂದರ್ಶನ ಮಾಡಿದ್ದು ನಾನೇ. ನಿಮ್ಮ ಸಾಮರ್ಥ್ಯದ ಗುಟ್ಟೇನು ಎಂಬುದಾಗಿ ಕೇಳಿದೆ. ಅದಕ್ಕೆ ಅವರು, ಎಗ್ಸ್ (ಮೊಟ್ಟೆಗಳು) ಎಂಬುದಾಗಿ ಉತ್ತರಿಸಿದರು. ಆದರೆ, ಭಕ್ತ ಮಂಡಳಿಯು ಎಗ್ಸ್ ಎಂಬುದನ್ನು ಸೆಕ್ಸ್‌ ಎಂಬುದಾಗಿ ತಿರುಚಿದೆ” ಎಂಬುದಾಗಿ ನ್ಯೂಸ್‌ ದಿ ಟ್ರುತ್‌ ಎಂಬ ಮಾಧ್ಯಮ ಸಂಸ್ಥೆ ವರದಿಗಾರ ತಮಲ್ ಸಾಹ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ವರದಿಗಾರ ಸ್ಪಷ್ಟನೆ ನೀಡುವ ಹೊತ್ತಿಗೆ ವಿಡಿಯೊ ಭಾರಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ. 49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ರೂ. ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ.

Related posts

ದಕ್ಷಿಣ ಕಾಶ್ಮೀರ: ಯೋಧರ ಗುಂಡಿಗೆ ಇಬ್ಬರು ಉಗ್ರರು ಬಲಿ

ಕೇರಳ: ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ! ವಿದ್ಯಾರ್ಥಿನಿ ಬಾಯ್ಬಿಟ್ಟಳು ಕರಾಳ ಸತ್ಯ!

ಒಡಿಶಾದ ಆರೋಗ್ಯ ಸಚಿವರನ್ನು ಗುಂಡಿಟ್ಟು ಹತ್ಯೆ ಮಾಡಿದ ಎ.ಎಸ್.ಐ ಮಾನಸಿಕ ಅಸ್ವಸ್ಥ!, ಹೊಸ ತಿರುವು ಪಡೆದುಕೊಂಡ ಪ್ರಕರಣ