ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಆಘಾತಕಾರಿ ಮಾಹಿತಿ ಹಂಚಿಕೊಂಡ ಸೀಮಾ ಹೈದರ್‌ ಮಾಜಿ ಗಂಡ..! ಪ್ರೇಮವಲ್ಲ ಆಕೆಗೆ ಪಾಕ್ ಸೇನೆಯ ಜೊತೆ ನಂಟಿದೆ ಎಂದದ್ದೇಕೆ ಆತ..?

ನ್ಯೂಸ್ ನಾಟೌಟ್: ಆನ್‌ಲೈನ್‌ ಪಬ್‌ ಜಿ ಗೇಮ್‌ ಆಡುವಾಗ ಪರಿಚಯವಾದ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಸಚಿನ್‌ ಮೀನಾ ಜತೆ ಇರುವ ಸೀಮಾ ಹೈದರ್‌(Seema Haider) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸೀಮಾ ಹೈದರ್‌ ಮೊದಲ ಪತಿ ಗುಲಾಂ ಹೈದರ್‌ ಸೀಮಾ ಬಗ್ಗೆ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದು, ಇದೀಗ ಬಹಳ ಚರ್ಚೆ ಆಗುತ್ತಿದೆ.

2020ರಲ್ಲಿ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್‌ ಅವರು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ 2023ರಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್‌ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್‌, ಆಕೆಯ ನಾಲ್ಕು ಮಕ್ಕಳು, ಸಚಿನ್‌ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್‌ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್‌ ವಿಚಾರಣೆ ಕೂಡ ನಡೆಸಿದೆ. ತೀವ್ರ ವಿಚಾರಣೆ ಬಳಿಕ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಅವರು ಒಟ್ಟಿಗೆ ವಾಸಿಸಲು ಭಾರತ ಅನುಮತಿ ನೀಡಲಾಗಿತ್ತು ಈಗ ಮತ್ತೆ ಆಕೆಯ ಮಾಜಿ ಗಂಡನ ಹೇಳಿಕೆ ಅನುಮಾನ ಮೂಡಿಸಿದೆ.

ಸೀಮಾ ಪ್ರೀತಿ ಪ್ರೇಮಕ್ಕಾಗಿ ಭಾರತಕ್ಕೆ ಬಂದಿಲ್ಲ. ಆಕೆಯ ಉದ್ದೇಶ ಬೇರೆಯದ್ದೇ ಇದೆ. ಆಕೆ ಮತ್ತು ಆಕೆ ಕುಟುಂಬಸ್ಥರು ಆಗಾಗ ಪಾಕಿಸ್ತಾನಕ್ಕೆ ಭೇಟಿ ಕೊಡುತ್ತಿರುತ್ತಾರೆ. ಅಲ್ಲದೇ ಅವರು ಪಾಕ್‌ ಸೇನೆ ಜೊತೆ ನಂಟು ಹೊಂದಿದ್ದಾರೆ ಎಂದು ಗುಲಾಂ ಹೇಳಿಕೆಯೊಂದನ್ನು ಕೊಟ್ಟಿದ್ದಾನೆ. ಸೀಮಾ ಆಗಾಗ ಪಾಕಿಸ್ತಾನ ಸೇನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾಳೆ. ಆಕೆ ಚಿಕ್ಕಪ್ಪ ಗುಲಾಮ್‌ ಅಕ್ಬರ್‌ ಕೂಡ ಪಾಕ್‌ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆತನನ್ನು ಆಗಾಗ ಭೇಟಿ ಆಗುತ್ತಿರುತ್ತಾಳೆ. ಇದನ್ನೆಲ್ಲಾ ನೋಡಿದರೆ ಆಕೆ ಭಾರತಕ್ಕೆ ಹೋಗಿರುವುದು ಗೂಢಾಚಾರಿಣಿಯಾಗೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ ಎಂದು ಗುಲಾಮ್‌ ಹೇಳಿದ್ದಾನೆ.

Click 👇

https://newsnotout.com/2024/05/hindu-muslim-marriage-issue-and-police
https://newsnotout.com/2024/05/vacancy-in-bmtc-conductor-job
https://newsnotout.com/2024/05/love-and-man-mistaken-and-police
https://newsnotout.com/2024/05/koragajja-cinema-director-sudhir-attavara

Related posts

ಯಾರೂ ವಾಸವಿಲ್ಲದ ಮನೆಯ ಫ್ರಿಡ್ಜ್ ​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ..! 14 ಎಕರೆ ಜಾಗದಲ್ಲಿರುವ ಪಾಳು ಬಿದ್ದ ಮನೆ..!

ಭಾರತದಿಂದ ಕಳ್ಳಸಾಗಣೆಯಾಗಿದ್ದ 297 ಪ್ರಾಚೀನ ವಸ್ತುಗಳನ್ನು ಮೋದಿಗೆ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ, ಜೋ ಬೈಡನ್ ಗೆ ಧನ್ಯವಾದ ತಿಳಿಸಿದ ನರೇಂದ್ರ ಮೋದಿ

ಫಸ್ಟ್​​​ ನೈಟ್​​ಗೆ ವಯಾಗ್ರ ತೆಗೆದುಕೊಂಡ ವರ..!ಹಲವು ಕನಸು ಕಟ್ಟಿಕೊಂಡು ಮದುವೆಯಾಗಿದ್ದಾಕೆ ಕೊನೆಯುಸಿರು..!