Uncategorized

ನಾಳೆ ಎಲ್ಲ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ ರುಪ್ಸಾ

ಬೆಂಗಳೂರು: ನಾಳೆ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ರಾಜ್ಯದ ಖಾಸಗಿ ಶಾಲೆಗಳಿಗೆ ರುಪ್ಸಾ ಕರ್ನಾಟಕದಿಂದ ರಜೆ ಘೋಷಣೆ ಮಾಡಲಾಗಿದೆ.ಸರ್ಕಾರಿ ಶಾಲೆಗಳಿಗೆ ರಜೆ ನೀಡುವ ಕುರಿತಾಗಿ ಚರ್ಚೆ ನಡೆದಿದ್ದು, ಶೀಘ್ರವೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ನಾಳೆ ನಡೆಯಬೇಕಿದ್ದ ಎಂಬಿಎ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ನಟ ಪುನೀತ್ ರಾಜ್ ಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಎಂಬಿಎ ಅಂತಿಮ ವರ್ಷದ ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂಡೂಡಲಾಗಿದೆ ಎಂದು ಬೆಂಗಳೂರು ಸಿಟಿ ವಿವಿ ಕುಲಪತಿ ಲಿಂಗರಾಜು ತಿಳಿಸಿದ್ದಾರೆ.

Related posts

ದರ್ಶನ್ ಬಗ್ಗೆ ಮಾತನಾಡಿದ ಸುದೀಪ್..! ನಾನು ಒಳಗೆ ಹೋಗಿ ಅವರನ್ನ ಹೊರಗೆ ಕಳಿಸಬೇಕಾ ಎಂದದ್ದೇಕೆ ಕಿಚ್ಚ..?

ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿಗೆ ಝಡ್ ಪ್ಲಸ್ ಭದ್ರತೆ

‘ಕರಿಮಣಿ ಮಾಲೀಕ ನೀನಲ್ಲ’ ರೀಲ್ಸ್ ತಂದ ಆಪತ್ತು, ಪತ್ನಿಯ ರೀಲ್ಸ್ ಹುಚ್ಚಿಗೆ ‘ಕರಿಮಣಿ ಮಾಲೀಕ’ ಆತ್ಮಹತ್ಯೆಗೆ ಶರಣು