ಕ್ರೈಂವೈರಲ್ ನ್ಯೂಸ್

ಶಾಲಾ ವಿದ್ಯಾರ್ಥಿಗಳಿದ್ದ ಆಟೋ ರಿಕ್ಷಾ ಪಲ್ಟಿ..! ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು..!

ನ್ಯೂಸ್‌ ನಾಟೌಟ್‌: ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋವೊಂದು ಪಲ್ಟಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಾಗಳಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಬಾಬುಗೌಡ ದರ್ಶನಾಪುರ ವೃತ್ತದ ಬಳಿ ನಡೆದಿದೆ.

ಸೆ.10ರ ಮಂಗಳವಾರ ಘಟನೆ ನಡೆದಿದ್ದು, ಎದುರಿಗೆ ಬಂದ ಬೈಕ್ ಸವಾರನನ್ನು ತಪ್ಪಿಸಲು ಆಟೋ‌ವನ್ನು ಬಲಕ್ಕೆ ಎಳೆದುಕೊಂಡ ಆಯತಪ್ಪಿ ಪಲ್ಟಿಯಾಗಿದೆ ಎಂದು ನಗರ ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ.

6 ಜನ‌ ವಿದ್ಯಾರ್ಥಿಗಳಿದ್ದ ಆಟೋ ಪಲ್ಟಿಯಾಗಿದ್ದು, ಭಾರೀ ದುರಂತ ತಪ್ಪಿದೆ. ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ತೆರಳುತ್ತಿದ್ದ ಆಟೋದಲ್ಲಿ‌ 3 ಜನ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ನಗರದ ಆಸ್ಪತ್ರೆಯೊಂದ‌ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನುಳಿದ ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಸಣ್ಣ-ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/09/darshan-thugudeepa-charge-sheet-kannada-news-highcourt-kannada-news/
https://newsnotout.com/2024/09/kananda-news-viral-news-video-cctv-fixed-on-the-doubter-head/
https://newsnotout.com/2024/09/darshan-thugudeepa-kannada-news-charge-sheet-leakage-bengaluru/
https://newsnotout.com/2024/09/iphone-16-and-pro-released-kannada-news-viral-news-technology/
https://newsnotout.com/2024/09/darshan-kannada-news-charge-sheet-kannada-news-shubha-poonja-and-ragini/#google_vignette
https://newsnotout.com/2024/09/railway-incident-kannada-news-gas-cylinder-kannada-news/
https://newsnotout.com/2024/09/rameshwaram-cafe-kannada-news-viral-news-nia-case-court/

Related posts

ಸಂಘರ್ಷಕ್ಕೆ ಕಾರಣವಾದ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಮುಂದಾದ ಅಮೆರಿಕ..! ಇಸ್ರೇಲ್ ಅಧ್ಯಕ್ಷರ ಎದುರಲ್ಲೇ ಟ್ರಂಪ್ ಅಚ್ಚರಿಯ ಹೇಳಿಕೆ..!

ಸಂಸದ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ..? ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದಂದೇ ನಡೆಯಿತಾ ಅಚಾತುರ್ಯ?

ಕಡಬ: ಕಾಡಿನೊಳಗಿಂದ ನೀರಿನಲ್ಲಿ ಹರಿದು ಬಂತು ಮಾನವನ ತಲೆಬುರುಡೆ