ಕರಾವಳಿ

ಬೆಳ್ತಂಗಡಿಯಲ್ಲಿ ಭೀಕರ ರಸ್ತೆ ಅಪಘಾತ:ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಬೆಳ್ತಂಗಡಿಯ ಮಲೆಬೆಟ್ಟು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಶಾಲಾ ಬಸ್ ಹಾಗೂ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಏನಿದು ಘಟನೆ?

ಶಾಲಾ ಬಸ್ಸು ಕೊಯ್ಯೂರಿನಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾಗ ಬೆಳ್ತಂಗಡಿಯಿಂದ ಕೊಯ್ಯೂರು ಕಡೆಗೆ ಹೋಗುತ್ತಿದ್ದ ಗೂಡ್ ರಿಕ್ಷಾಕ್ಕೆ ಮಲೆಬೆಟ್ಟು ದೇವಸ್ಥಾನದ ಬಳಿ ಡಿಕ್ಕಿ ಹೊಡೆದಿದೆ.ರಿಕ್ಷಾದಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಸ್ಥಳೀಯರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ರಿಕ್ಷಾದಲ್ಲಿದ್ದ ರಝಾಕ್(50) ಸಾವನ್ನಪ್ಪಿದ್ದಾರೆ . ಕುವೆಟ್ಟು ಗ್ರಾಮದ ಪಿಲಿಚಾಮುಂಡಿ ನಿವಾಸಿ ಚಾಲಕ ಹನೀಫ್ (48) , ಪಣಕಜೆ ನಿವಾಸಿ ಕೆ.ಮೊಹಮ್ಮದ್(57) ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಡೆಂಗ್ಯೂ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುತ್ತಾ..? ಡೆಂಗ್ಯೂ ಜ್ವರ ಬಂದ್ರೆ ಸುಲಭವಾಗಿ ಕಂಡು ಹಿಡಿಯೋದು ಹೇಗೆ..? ಕೆವಿಜಿ ವೈದ್ಯ ದಂಪತಿ ನೀಡಿದ ಸಲಹೆಗಳೇನು..? ಇಲ್ಲಿದೆ ಪೂರ್ಣ ಲೇಖನ

ಉಪ್ಪಿನಂಗಡಿ : ಒಂದೇ ಪ್ರದೇಶದಲ್ಲಿ ಎರಡು ಪ್ರತ್ಯೇಕ ಅಪಘಾತ..!,ಗ್ಯಾರೇಜ್‌ನಿಗೆ ಮೂರನೇ ಬಾರಿ ಹಾನಿ,ಪ್ರಾಣಾಪಾಯದಿಂದ ಪಾರಾದ ಮಾಲಕ..!

ಚಂಡಮಾರುತದಿಂದಾಗಿ ಮಧ್ಯರಾತ್ರಿಯಿಂದಲೇ ಭೂಕುಸಿತ..! 5.84 ಲಕ್ಷ ಜನರ ಸ್ಥಳಾಂತರ..!