ಕ್ರೈಂ

ಸರ್ಕಲ್ ಕಬಡ್ಡಿ ಆಟಗಾರ ದುಷ್ಕರ್ಮಿಗಳ ಗುಂಡಿಗೆ ಬಲಿ

ಜಲಂಧರ್: ಖ್ಯಾತ ಕಬಡ್ಡಿ ಪಟ್ಟು ಸಂದೀಪ್ ನಂಗಲ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ಜಲಂಧರ್ ನಲ್ಲಿ ನಡೆಯುತ್ತಿದ್ದ ಕಬಡ್ಡಿ ಟೂರ್ನಿ ವೇಳೆ ದುಷ್ಕರ್ಮಿಗಳು ನಂಗಲ್ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಬರೋಬ್ಬರಿ 20 ಗುಂಡುಗಳು ಸಂದೀಪ್ ನಂಗಲ್ ದೇಹ ಹೊಕ್ಕಿದೆ. ಪರಿಣಾಮ ಸಂದೀಪ್ ನಂಗಲ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಸರ್ಕಲ್ ಕಬಡ್ಡಿಯಲ್ಲಿ ಸಂದೀಪ್ ನಂಗಲ್ ಅಂತಾರಾಷ್ಟ್ರೀಯ ಕಬಡ್ಡಿ ಪಟುವಾಗಿ ಗುರುತಿಸಿಕೊಂಡಿದ್ದಾರೆ. ಕಳೆದೊಂದು ದಶಕದಿಂದ ದೇಶ ವಿದೇಶಗಳಲ್ಲಿ ಟೂರ್ನಿಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರೆ. ಕೆನಡಾ, ಅಮೆರಿಕ, ಲಂಡನ್ ಸೇರಿದಂತೆ ಹಲವು ರಾಷ್ಟಗಳ ಲೀಗ್ ಟೂರ್ನಿಗಳಲ್ಲಿ ಸಂದೀಪ್ ನಂಗಲ್ ಆಡಿದ್ದಾರೆ. ಇನ್ನು ಪಂಜಾಬ್ ರಾಜ್ಯ ಕಬಡ್ಡಿ ತಂಡವನ್ನೂ ಪ್ರತಿನಿಧಿಸಿದ್ದಾರೆ.

Related posts

ರಸ್ತೆಯಲ್ಲಿ ರಕ್ತದ ಕಲೆಗಳು! ನಿಗೂಢ ರಕ್ತದ ಕಲೆಗಳು ಹೇಳುತ್ತಿವೆ ರೋಚಕ ಕತೆ!

ಶಿಕ್ಷಕನ ಮೊಬೈಲ್ ​​ನಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳ ಫೋಟೋ..! ಸರ್ಕಾರಿ ಶಾಲಾ ಶಿಕ್ಷಕ ಮೊಹಮ್ಮದ್​ ಸಾದಿಕ್ ಬಂಧನ

ʼಜೈ ಶ್ರೀರಾಮ್ʼ ಗೀತೆ ಹಾಕಿ ನೃತ್ಯ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! 24 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು