ಕರಾವಳಿದಕ್ಷಿಣ ಕನ್ನಡಸುಳ್ಯ

ಮಾಜಿ ಸಿಎಂ ಸದಾನಂದ ಗೌಡರ ಮಧ್ಯಸ್ಥಿಕೆ, ಕೊನೆಗೂ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘಗಳ ಮುನಿಸು ಅಂತ್ಯ..!

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಿಸುತ್ತಿದ್ದ ಎರಡು ಗೌಡ ಸಂಘಗಳ ಮುನಿಸು ಕೊನೆಗೂ ಅಂತ್ಯಗೊಂಡಿದೆ. ಮಾಜಿ ಸಿಎಂ ಸದಾನಂದ ಗೌಡರ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಸರಿಯಾಗಿದ್ದು ಮುಂದಿನ ದಿನಗಳಲ್ಲಿ ಎರಡೂ ಸಂಘಗಳು ಕೂಡ ಒಟ್ಟಾಗಿ ಒಂದೇ ಧ್ಯೇಯೋದ್ದೇಶಗಳೊಂದಿಗೆ ಕಾರ್ಯೋನ್ಮುಖವಾಗಲಿವೆ.

ಅ.23ರಂದು ಪುತ್ತೂರಿನಲ್ಲಿ ಡಿ.ವಿ ಸದಾನಂದ ಗೌಡರ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಮತ್ತು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಸಂಘ ಎಂಬ ಎರಡು ಸಂಘಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಎರಡು ಸಂಘಗಳು ಇದ್ದಿದ್ದರಿಂದ ಸಹಜವಾಗಿ ಸ್ಪರ್ಧೆ ಏರ್ಪಟ್ಟಿತ್ತು. ಭಿನ್ನಮತಕ್ಕೂ ಕಾರಣವಾಗಿತ್ತು. ಈ ನಡುವೆ ಸಂಧಾನ ಸಭೆ ನಡೆದು ಎಲ್ಲವೂ ಬಗೆಹರಿದಿದ್ದು ಇನ್ನು ಮುಂದೆ ಒಂದೇ ಸಂಘ, ಒಂದೇ ಧ್ಯೇಯ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಒಕ್ಕಲಿಗ ಸಂಘದ ಕಾರ್ಯಾಧ್ಯಕ್ಷರಾಗಿ ಡಿ.ಬಿ. ಬಾಲಕೃಷ್ಣ, ಅಧ್ಯಕ್ಷರಾಗಿ ಲೋಕಯ್ಯ ಗೌಡರು ಆಯ್ಕೆಯಾಗಿದ್ದಾರೆ.

Related posts

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವಿದೇಶದಲ್ಲಿ ಅಡಗಿ ಕುಳಿತ್ತಿದ್ದ ಆರೋಪಿ ಕೊನೆಗೂ ಬಂಧನ

ಮಂಗಳೂರು: ಪಿಜಿಯಲ್ಲಿ ಯುವ ವೈದ್ಯೆ ಸಾವು, ರಾತ್ರಿ ತಾಯಿ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದ ಹುಡುಗಿಗೆ ಇದ್ದಕ್ಕಿದ್ದಂತೆ ಆಗಿದ್ದೇನು..?

ನುರಿತ ಕಂಪ್ಯೂಟರ್ ಶಿಕ್ಷಕಿ ಬೇಕಾಗಿದ್ದಾರೆ