ಕರಾವಳಿಸುಳ್ಯ

ಸಂಪಾಜೆ: ಅಲ್ಪ ಕಾಲದ ಅಸೌಖ್ಯದಿಂದ ಗುಂಡ್ಯ ಪುರುಷೋತ್ತಮ ನಿಧನ, ಕಣ್ಣೀರಾದ ಕುಟುಂಬ ವರ್ಗ

ನ್ಯೂಸ್ ನಾಟೌಟ್: ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕೊಡಗು ಸಂಪಾಜೆ ಗ್ರಾಮದ ಗುಂಡ್ಯ ಪುರುಷೋತ್ತಮ ಬುಧವಾರ ನಿಧನರಾಗಿದ್ದಾರೆ. ಅವರಿಗೆ 64 ವರ್ಷವಾಗಿತ್ತು. ಸಂಪಾಜೆ ಗ್ರಾಮದಲ್ಲಿ ಪುರುಷಣ್ಣ ಎಂದೇ ಜನರಿಗೆ ಪರಿಚಿತರಾಗಿದ್ದರು. ಮಡಿಕೇರಿಯಲ್ಲಿ ವೈದ್ಯರಾಗಿರುವ ಡಾ. ಸೂರ್ಯ ಕುಮಾರ್ ಅವರ ತೋಟದ ಉಸ್ತುವಾರಿ ಜವಾಬ್ದಾರಿಯನ್ನು ಹೊತ್ತು ಹಲವು ವರ್ಷಗಳಿಂದ ಕೆಲಸ ಮಾಡಿದ್ದರು. ಇತ್ತೀಚಿಗೆ ಅವರು ಅನಾರೋಗ್ಯಕ್ಕೀಡಾಗಿದ್ದರು.

ಚಿಕಿತ್ಸೆ ಬಳಿಕ ಸಂಪಾಜೆಯ ಬೈಲಿನಲ್ಲಿರುವ ತಮ್ಮ ಮನೆಯಲ್ಲಿದ್ದರು. ಕಳೆದ ಒಂದು ವಾರದ ಹಿಂದೆ ಅನಾರೋಗ್ಯ ಉಲ್ಬಣಿಸಿ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಬುಧವಾರ ಸಂಜೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಗಂಗಾವತಿ, ಮಗಳು ದೇವಿಕಾ, ಮಗ ದೇವೀಶ, ಅಳಿಯ ಚಂದ್ರೇಶಖರ ನಿಡಿಲು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

https://www.youtube.com/watch?v=91Tc8e4avZ8

Related posts

ಸುಳ್ಯ : ಕೆ.ವಿ. ಜಿ ದಂತ ಮಹಾವಿದ್ಯಾಲಯದ 23 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

ಇಂದಿನಿಂದ(ಎ.3) 5 ದಿನ ದಕ್ಷಿಣ ಕನ್ನಡದಲ್ಲಿ ಮಳೆ ಸಾಧ್ಯತೆ..! 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದ ಹವಾಮಾನ ಇಲಾಖೆ

ಕಡಬ: ಕುಮಾರಧಾರ ನದಿಗೆ ವ್ಯಕ್ತಿ ಜಿಗಿದ ಶಂಕೆ, ಪೊಲೀಸರಿಂದ ಹುಡುಕಾಟ