ಕೊಡಗುಸುಳ್ಯ

ಕೊಡಗು ಸಂಪಾಜೆ: ಸಂಭ್ರಮದ ಗೌರಿ ಗಣೇಶೋತ್ಸವಕ್ಕೆ ಕ್ಷಣಗಣನೆ, ಶ್ರೀ ಪಂಚಲಿಂಗೇಶ್ವರನ ಆವರಣದಲ್ಲಿ 30ನೇ ವರ್ಷದ ಗೌರಿ -ಗಣೇಶೋತ್ಸವಕ್ಕೆ ಸರ್ವ ಸಿದ್ಧತೆ

ನ್ಯೂಸ್ ನಾಟೌಟ್ : ಸಾರ್ವಜನಿಕ ಶ್ರೀದೇವತಾರಾಧನ ಸಮಿತಿ ಸಂಪಾಜೆ ಕೊಡಗು 30ನೇ ವರ್ಷದ ಗೌರಿ -ಗಣೇಶೋತ್ಸವವು ಸೆ.18ರಿಂದ ಆರಂಭವಾಗಲಿದೆ. ಒಟ್ಟು ಮೂರು ದಿನ ನಡೆಯಲಿರುವ ಕಾರ್ಯಕ್ರಮವು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೊಡಗು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ತಾನದ ಆವರಣದಲ್ಲಿ ನಡೆಯಲಿದೆ.

ಸೆ.18ರಂದು ಸೋಮವಾರ ಪೂರ್ವಾಹ್ನ 10ರಿಂದ ಪುರುಷರಿಗೆ ಮತ್ತು ಮಹಿಳೆಯರಿಗೆ ಕೆಸರು ಗದ್ದೆಯಲ್ಲಿ ಹಗ್ಗಜಗ್ಗಾಟ ನಡೆಯಲಿದೆ. ಸಂಜೆ 5 ಗಂಟೆಯಿಂದ ವಿಠಲ ನಾಯಕ್ ಕಲ್ಲಡ್ಕ ಅವರಿಂದ ನೂತನ ಶೈಲಿಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಸೆ.19ರಂದು ಮಂಗಳವಾರ ಅಪರಾಹ್ನ ಎರಡು ಗಂಟೆಯಿಂದ ಸಮಾರೋಪ ಸಮಾರಂಭ ಮತ್ತು ಧಾರ್ಮಿಕ ಉಪನ್ಯಾಸ ಧನಂಜಯ ಅಗೋಳಿ ಕಜೆ ಹಾಗೂ ಸವಿತಾ ಬಳಗದವರಿಂದ ಭರತನಾಟ್ಯ ಮತ್ತು ವಿವಿಧ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.

ಸೆ.20 ಬುಧವಾರ ವಿವಿಧ ಮನೋರಂಜನಾ ಕಾರ್ಯಕ್ರಮ ಮತ್ತು ಬಹು ಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ರಿಂದ ವಾದ್ಯ ಘೋಷಗಳೊಂದಿಗೆ ಗೌರಿ ಗಣೇಶನ ಮೂರ್ತಿಗಳ ಶೋಭಾಯಾತ್ರೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.

Related posts

ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ..!, 2-3 ಸೆಕೆಂಡ್ ಗಡಗಡ ಕಂಪನ, ಭಾರಿ ಶಬ್ಧಕ್ಕೆ ಬೆಚ್ಚಿ ಬಿದ್ದ ಜನ..!

ಸಂಪಾಜೆ ಚೆಕ್‌ ಪೋಸ್ಟ್‌ಗೆ ಉಪ ವಿಭಾಗಾಧಿಕಾರಿ ದಿಢೀರ್‌ ಭೇಟಿ

ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಮಡಿಕೇರಿಯ ಪ್ರಾಧ್ಯಾಪಕನ ಹೆಸರು..!,ಯಾರಿವರು? ಇವರ ಸಾಧನೆಯೇನು ಗೊತ್ತಾ?