ಕರಾವಳಿ

ಸಂಪಾಜೆಯ ಶಾಲೆಗಳಲ್ಲಿ ವಿದ್ಯುತ್ ಮೀಟರ್ ಅಪಾಯ

ನ್ಯೂಸ್ ನಾಟೌಟ್:  ಶಾಲೆ ಮಕ್ಕಳಿಗೆ ಕೈಗೆಟುಕುವ ಸ್ಥಳಗಳಲ್ಲಿ ವಿದ್ಯುತ್ ಮೀಟರ್ ಅಳವಡಿಕೆ ಮಾಡಲಾಗಿದ್ದು ತಕ್ಷಣ ಅದನ್ನು ತೆರವುಗೊಳಿಸಬೇಕು ಎಂದು ಸಂಪಾಜೆ ಗ್ರಾಮ ಪಂಚಾಯತ್ ಮಹಿಳೆಯರ ಮತ್ತು ಮಕ್ಕಳ ಕಾವಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಶಾಲೆಯ ಎಲ್ಲೆಂದರಲ್ಲಿ ವಿದ್ಯುತ್ ಮೀಟರ್ ಅಳವಡಿಕೆ ಮಾಡಲಾಗಿದೆ. ಇದು ಮಳೆ ನೀರು ಬಿದ್ದು ಇನ್ನಷ್ಟು ಅಪಾಯವನ್ನು ತಂದೊಡ್ಡುತ್ತಿದೆ. ಮಕ್ಕಳ ಸುರಕ್ಷತೆಗೆ ಮೊದಲ ಕ್ರಮವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳಲ್ಲಿ ತೆಗೆದುಕೊಳ್ಳುವುದಾಗಿ ತಿಳಿಸಿದರು. ಅಲ್ಲದೆ ಗೂನಡ್ಕ ಶಾಲೆಯಲ್ಲಿ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು ಅದನ್ನು ಸರಿಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಯಿತು. ಪಂಚಾಯತ್ ಅಧ್ಯಕ್ಷ ಜೆ.ಕೆ.ಹಮೀದ್, ಉಪಾಧ್ಯಕ್ಷೆ  ಲಿಸ್ಸಿಮೊನಾಲಿಸಾ, ಸದಸ್ಯರು ಗಳಾದ ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು ಅನುಪಮಾ, ಅಬೂಸಾಲಿ, ಗ್ರಾಮ ಕರಣಿಕರಾದ ಮಿಯಾ ಶಾಬ್ ಮುಲ್ಲಾ, ಲಯನ್ಸ್ ಕ್ಲಬ್ ಸಂಪಾಜೆ ಅಧ್ಯಕ್ಷೆ ನಳಿನಿ ಕಿಶೋರ್, ಅಂಗನವಾಡಿ ಕಾರ್ಯಕರ್ತರು, ಆಶಾ, ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ವಿದ್ಯಾರ್ಥಿ ನಾಯಕರು ಹಾಜರಿದ್ದರು

Related posts

ಬೆಳ್ಳಾರೆ, ಸುಬ್ರಹ್ಮಣ್ಯಕ್ಕೆ ಹೊಸ ಪೊಲೀಸ್‌ ಉಪನಿರೀಕ್ಷಕರು

ಧರ್ಮಸ್ಥಳಕ್ಕೆ ಪುಸಲಾಯಿಸಿ ಕರೆಯಿಸಿಕೊಂಡಿದ್ದ, ವಿವಿಧ ಕಡೆ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಅಪರಾಧಿಗೆ 10 ವರ್ಷ ಜೈಲು, 2 ವರ್ಷದ ಬಳಿಕ ಸಂತ್ರಸ್ತೆಗೆ ಸಿಕ್ಕಿತು ನ್ಯಾಯ..!

ಸುಳ್ಯ: ಹಿಂದೂ ಹುಡುಗಿಯನ್ನು ಕರೆದುಕೊಂಡು ಹೋದ ಅನ್ಯಕೋಮಿನ ಯುವಕನಿಗೆ ಹಿಗ್ಗಾಮುಗ್ಗ ಥಳಿತ