ಕರಾವಳಿಸುಳ್ಯ

ಸಂಪಾಜೆ : ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ,ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾದ ವೃದ್ದೆ..!

ನ್ಯೂಸ್ ನಾಟೌಟ್ : ಕಳೆದೆರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು ಅಲ್ಲಲ್ಲಿ ಹಾನಿಯಾಗುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.ನಿನ್ನೆಯಷ್ಟೇ ಸುಳ್ಯದ ಜಯನಗರ ಎಂಬಲ್ಲಿ ಎರಡು ಮನೆಗಳ ಕಾಂಪೌಂಡ್ ಕುಸಿದು ಮನೆಯೊಂದರ ಛಾವಣಿಗೆ ಹಾನಿಯಾದ ಘಟನೆ ವರದಿಯಾಗಿತ್ತು.ಇದೀಗ ಸಂಪಾಜೆಯ ಗಡಿಕಲ್ಲು ವಿಮಲಾ ಎಂಬುವವರ ಮನೆಗೆ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.

ಘಟನೆಯಿಂದಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.ಮನೆಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಗೃಹರಕ್ಷಕ ದಳ ಸಿಬ್ಬಂದಿ ರಾಮ್ ರಾಜ್ ಭೇಟಿ ನೀಡಿದ್ದು,ಗ್ರಾಮಸ್ಥರೆಲ್ಲ ಒಟ್ಟಾಗಿ ಮರ ತೆರವು ಗೊಳಿಸುವ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಅವರು ತಿಳಿಸಿದ್ದಾರೆ.

Related posts

ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ ಹೈವೇ ಹೋಟೆಲ್ ಬಳಿ ಗೋಡೆಗೆ ಗುದ್ದಿದ ಕಾರು, ಕಾರಿನೊಳಗಿದ್ದವರಿಗೆ ತೀವ್ರ ಗಾಯ

Gruha Jyothi Scheme:ಗೃಹಜ್ಯೋತಿ ಯೋಜನೆಯ ಫ್ರೀ ವಿದ್ಯುತ್ ನಿರೀಕ್ಷೆಯಲ್ಲಿದ್ದವರಿಗೆ ಕರೆಂಟ್ ಶಾಕ್ ..!,ಬೆಸ್ಕಾಂ ಸಿಬ್ಬಂದಿ ಕರೆಂಟ್ ಬಿಲ್ ನೀಡಿದಾಗಲೇ ಗೊತ್ತಾಯ್ತು ಅಸಲಿ ವಿಚಾರ..!

ತಂದೆ ಸತ್ತು ಒಂದು ವರ್ಷದಲ್ಲೇ ಬೈಕ್ ಅಪಘಾತದಲ್ಲಿ ಮಗನೂ ಸಾವು, ಮೆದುಳು ನಿಷ್ಕ್ರಿಯ..!