ಕರಾವಳಿಸುಳ್ಯ

ಸಂಪಾಜೆ: ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುತ್ತಿದ್ದ ಆಡಿಗೆ ಗುದ್ದಿದ ವಾಹನ,ಗಂಭೀರ ಗಾಯಗೊಂಡು ಸ್ಥಳದಲ್ಲೇ ಉಸಿರು ಚೆಲ್ಲಿದ ಆಡು

ನ್ಯೂಸ್ ನಾಟೌಟ್ : ಸಂಪಾಜೆ ಭಾಗದಲ್ಲಿ ವಾಹನ ಅಪಘಾತಕ್ಕೆ ಸಾಕುಪ್ರಾಣಿ ಸೇರಿದಂತೆ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿರುವ ಘಟನೆ ಆಗಾಗ ವರದಿಯಾಗುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಗೂನಡ್ಕ ಬಳಿ ಭಾರಿ ಗಾತ್ರದ ಕಾಡು ಹಂದಿಯೊಂದು ವಾಹನ ಅಪಘಾತಕ್ಕೀಡಾಗಿ ಬಲಿಯಾಗಿತ್ತು.ಇದೀಗ ಸಂಪಾಜೆ ಗ್ರಾಮದ ಕಡೆಪಾಲದಲ್ಲಿ ಆಡು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಇಂದು ಮುಂಜಾನೆ ವೇಳೆಗೆ( ನ.3ರಂದು)ಕಡೆಪಾಲ ಸೇತುವೆ ಬಳಿಯ ವರ್ಗೀಸ್ ಅವರ ಅಂಗಡಿಯ ಬಳಿ ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.ರಸ್ತೆಯಲ್ಲಿ ಆಡು ಸಂಚರಿಸುತ್ತಿದ್ದ ಆಡು ವೇಗವಾಗಿ ಬಂದ ಕಾರಿನಡಿಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟಿದೆ ಎಂದು ತಿಳಿದು ಬಂದಿದೆ.ಈ ವೇಳೆ ಗಂಭೀರ ಗಾಯಗೊಂಡಿರುವ ಆಡು ಸ್ಥಳದಲ್ಲೇ ಉಸಿರು ಚೆಲ್ಲಿದೆ.

ಈ ಭಾಗದಲ್ಲಿ ಆಡುಗಳ ಗುಂಪು ಆಗಾಗ ಕಾಣಿಸಿಕೊಳ್ಳುತ್ತಿದ್ದು,ವಾಹನ ಸವಾರರು ಕೂಡ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ದೂರಿದ್ದು,ಈ ಬಗ್ಗೆ ಆಡು ಮಾಲೀಕರು ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

Related posts

ತಡರಾತ್ರಿ ಬಿಜೆಪಿ ಕಚೇರಿ ಸಮೀಪ ಮಚ್ಚು ಹಿಡಿದು ಪುಡಿ ರೌಡಿಯ ಅಟ್ಟಹಾಸ! ವಾಹನಗಳ ಗ್ಲಾಸ್ ಪುಡಿಗೈದ ಪುಂಡ..!

ಪುತ್ತೂರು: ನಕಲಿ ದಾಖಲೆಗಳ ಸರದಾರ ಅರೆಸ್ಟ್‌..! ಸುಳ್ಯ, ಪುತ್ತೂರು ನಗರಸಭೆ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್‌ಗಳ ನಕಲಿ ದಾಖಲೆಗಳು ವಶಕ್ಕೆ

ಸುಳ್ಯ: ಹೊಳೆಗೆ ಹಾರಿದ್ದ ಯುವಕ ಶವವಾಗಿ ಪತ್ತೆ, ಕೊನೆಗೂ ಸಿಕ್ಕಿತು ಮೃತದೇಹ