ವೈರಲ್ ನ್ಯೂಸ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಂಚಿಕೊಂಡ ವಿಡಿಯೋದಿಂದ ಬಡ ಬಾಲಕಿಯ ಜೀವನವೇ ಬದಲಾಯಿತು..!, ಯಾವುದು ಆ ವಿಡಿಯೋ..? ಇಲ್ಲಿದೆ ವೀಕ್ಷಿಸಿ

ನ್ಯೂಸ್ ನಾಟೌಟ್ : ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಂಚಿಕೊಂಡ ವಿಡಿಯೋವೊಂದು ದೊಡ್ಡ ಸಂಚಲನ ಮೂಡಿಸಿದೆ. ಮಾತ್ರವಲ್ಲ ಆ ವಿಡಿಯೋದಲ್ಲಿದ್ದ ಬಡ ಬಾಲಕಿಯ ಜೀವನದ ದಾರಿಯೇ ಬದಲಾಗಿದೆ. ಹಾಗಿದ್ದರೆ ಕ್ರಿಕೆಟ್ ದೇವರು ಹಂಚಿಕೊಂಡ ಆ ವಿಡಿಯೋ ಯಾವುದು ಅನ್ನುವುದರ ಬಗೆಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

ಈಕೆ ರಾಜಸ್ಥಾನದ 12 ವರ್ಷದ ಬಾಲಕಿ ಸುಶೀಲಾ ಮೀನಾ. ಪ್ರಸ್ತುತ ತನ್ನ ಅತ್ಯುತ್ತಮ ಬೌಲಿಂಗ್ ಆಕ್ಷನ್ ನಿಂದ ಹೆಸರು ಪಡೆದುಕೊಂಡಿದ್ದಾಳೆ. ಸಚಿನ್ ತೆಂಡೂಲ್ಕರ್ ಸುಶೀಲಾ ಮೀನಾ ಬೌಲಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ವೇಗಿ ಝಹೀರ್ ಖಾನ್ ಅವರ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿರುವ ಬಾಲಕಿಯನ್ನು ಸಚಿನ್ ಹೊಗಳಿದ್ದಾರೆ.

ಇತ್ತ ಈ ವಿಡಿಯೋವನ್ನು ಗಮನಿಸಿದ ಝಹೀರ್ ಖಾನ್ ಕೂಡ ಸುಶೀಲಾ ಮೀನಾ ಬೌಲಿಂಗ್ ಗಮನಿಸಿದ್ದು, ಆಕೆಯ ಬೌಲಿಂಗ್ ತನಗಿಂತ ತುಂಬಾ ಪರಿಣಾಮಕಾರಿಯಾಗಿದೆ. ಅವಳು ತನ್ನ ಚಿಕ್ಕ ವಯಸ್ಸಿನಲ್ಲಿ ತುಂಬಾ ಬಲಶಾಲಿಯಾಗಿ ಕಾಣುತ್ತಿದ್ದಾಳೆ ಎಂದು ಝಹೀರ್ ಖಾನ್ ಹೊಗಳಿದಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆದಿತ್ಯ ಬಿರ್ಲಾ ಗ್ರೂಪ್, ‘ಫೋರ್ಸ್ ಫಾರ್ ಗುಡ್’ ಯೋಜನೆಯ ಅಡಿಯಲ್ಲಿ, ಸುಶೀಲಾಗೆ ಕ್ರಿಕೆಟ್ ತರಬೇತಿ ನೀಡುತ್ತೇವೆ. ನಾವೆಲ್ಲರೂ ಸುಶೀಲಾ ಅವರಿಗಾಗಿ ಒಂದಾಗೋಣ… ಅವಳು ಮಿಂಚುವಂತೆ ಮಾಡೋಣ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸುಶೀಲಾ ಮೀನಾ ಅವರ ಕ್ರಿಕೆಟರ್ ಆಗಬೇಕೆಂಬ ಕನಸನ್ನು ನನಸಾಗಿಸಲು ಇದೀಗ ಆದಿತ್ಯ ಬಿರ್ಲಾ ಗ್ರೂಪ್ ಮುಂದಾಗಿದೆ. ಒಟ್ಟಿನಲ್ಲಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡ ಒಂದೇ ಒಂದು ವಿಡಿಯೋ ಇದೀಗ 12 ವರ್ಷದ ಪುಟ್ಟ ಬಾಲಕಿ ಸುಶೀಲಾ ಮೀನಾ ಅವರ ಭವಿಷ್ಯಕ್ಕೆ ಹೊಸ ದಾರಿ ತೋರಿಸಿಕೊಟ್ಟಿದೆ.

Related posts

ವೃದ್ಧ ಮಾವನಿಗೆ ಮನಬಂದಂತೆ ಚಪ್ಪಲಿಯಲ್ಲಿ ಹೊಡೆದ ಸೊಸೆ..! ತಡೆಯಲು ಪ್ರಯತ್ನಿಸಿದ ಸಾಕು ನಾಯಿ..! ಇಲ್ಲಿದೆ ವೈರಲ್ ವಿಡಿಯೋ

ಚೈತ್ರಾ ಕುಂದಾಪುರ ಆಪ್ತನ ಮನೆಯಲ್ಲಿ ಸಿಕ್ತು 41 ಲಕ್ಷ ರೂ..! ಮೈಸೂರಿನಲ್ಲಿ ಕಾರ್ ನಿಲ್ಲಿಸಿ ನಂಬರ್ ಪ್ಲೇಟ್ ತೆಗೆದು ಸ್ವಾಮೀಜಿ ಹೋಗಿದ್ದೆಲ್ಲಿಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಿದ್ದರಾಮಯ್ಯನೇ ರಾಮ, ನಾನು ಆಂಜನೇಯ ಎಂದ ಮಾಜಿ ಸಚಿವ..! ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಎಂದು ವ್ಯಂಗ್ಯವಾಡಿದ್ದೇಕೆ ಹೆಚ್.ಆಂಜನೇಯ..?