ನ್ಯೂಸ್ ನಾಟೌಟ್ : ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲೈಕ್ , ಕಾಮೆಂಟ್ ಗಾಗಿ ನಿತ್ಯ ಸರ್ಕಸ್ ಮಾಡುತ್ತಿರುತ್ತಾರೆ. ಇನ್ನೂ ಕೆಲವರಂತೂ ಮಾನ ಮರ್ಯಾದೆ ಬಿಟ್ಟು ಪೋಟೋಗಳನ್ನು ಅಪ್‌ಲೋಡ್ ಮಾಡಿ ಜನರಿಂದ ಉಗಿಸಿಕೊಳ್ಳುತ್ತಿರುತ್ತಾರೆ. ಮತ್ತೂ ಕೆಲವರು ಅಪಾಯಕಾರಿ ಸ್ಟಂಟ್ ಗಳನ್ನು ಮಾಡಿ ಆ ವಿಡಿಯೋ ಅಪ್ ಲೋಡ್ ಮಾಡಿ ಲೈಕ್ಸ್ ಬಂತಾ ಅಂತ ನೋಡುತ್ತಿರುತ್ತಾರೆ. ಇಲ್ಲೊಬ್ಬ ತನ್ನ ಪತ್ನಿಯನ್ನೇ ಬೈಕ್ ನ ಹಿಂದೆ ಕೂರಿಸಿ ಸ್ಟಂಟ್ ಮಾಡಿ ಇದೀಗ ಜನರಿಂದ ಹಿಗ್ಗಾಮುಗ್ಗಾ ಟೀಕೆಗೆ ಗುರಿಯಾಗಿದ್ದಾನೆ.
ಹೌದು ಫೇಮಸ್ ಆಗಬೇಕೆಂದು ಪತ್ನಿಯನ್ನು ಬೈಕಿನಲ್ಲಿ ಕುಳ್ಳಿರಿಸಿ ಸ್ಟಂಟ್ ಮಾಡಿದ ವ್ಯಕ್ತಿಯ ನೀವು ಎಂದಾದರೂ ನೋಡಿದ್ದೀರಾ. ಇಲ್ಲೊಬ್ಬ ಭೂಪ ತನ್ನ ಪತ್ನಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಸ್ಟಂಟ್ ಮಾಡುತ್ತಿದ್ದ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವ್ಯಕ್ತಿಯು ತನ್ನ ಪತ್ನಿಯನ್ನು ರಾಯಲ್ ಎನ್ ಫೀಲ್ಡ್ ಬೈಕಿನ ಹಿಂಬದಿಯಲ್ಲಿ ಕುಳ್ಳರಿಸಿ ಅಪಾಯಕಾರಿ ಸ್ಟಂಟ್ ಮಾಡಿ ಐ ಡೋಂಟ್ ಕೇರ್ ಎನ್ನುವ ತರ ಡೇಂಜರಸ್ ಪ್ರದರ್ಶನವನ್ನು ನೀಡಿದ್ದಾನೆ. ಈ ವಿಡಿಯೋ ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಮ್ ನಂತಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿದ್ದು, ಯುವಕನ ಭಯಾನಕ ಪ್ರದರ್ಶನವನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಈ ಭೂಪನಿಗೆ ತಲೆ ಸರಿಯಿಲ್ಲ ಇವನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂದು ಜನ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.