Uncategorized

ಟೋಲ್ ಪ್ಲಾಜಾಗೆ ಗುದ್ದಿ ಆಂಬ್ಯುಲೆನ್ಸ್ ಪಲ್ಟಿ, ಮೂವರು ಸಾವು

ನ್ಯೂಸ್ ನಾಟೌಟ್: ತುರ್ತಾಗಿ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಬರುತ್ತಿದ್ದ ಆಂಬ್ಯುಲೆನ್ಸ್ ವೊಂದು ಟೋಲ್ ಪ್ಲಾಜಾದ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶಿರೂರು ಟೋಲ್‌ ಗೇಟ್‌ ನಲ್ಲಿ ಬುಧವಾರ ಘಟನೆ ನಡೆದಿದೆ.

ಹೊನ್ನಾವರದಿಂದ ಹೊರಟಿದ್ದ ಆಂಬ್ಯುಲೆನ್ಸ್ ರೋಗಿಯನ್ನು ಕರೆದುಕೊಂಡು ಕುಂದಾಪುರದ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಮೃತಪಟ್ಟವರಲ್ಲಿ ಒಬ್ಬರು ಮಹಿಳೆಯಾಗಿದ್ದು, ಇನ್ನಿಬ್ಬರು ಪುರುಷರೆಂದು ತಿಳಿದು ಬಂದಿದೆ. ಟೋಲ್ ಪ್ಲಾಜಾದ ಸಿಬ್ಬಂದಿ ಅಂಬ್ಯುಲೆನ್ಸ್ ಗೆ ದಾರಿ ಬಿಟ್ಟುಕೊಡುತ್ತಿರುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿರುವುದು ದುರಾದೃಷ್ಟಕರವಾಗಿದೆ.

Related posts

ಇಂಧನ ದರ ಇಳಿಸಿದ ಭಾರತವನ್ನು ಹೊಗಳಿದ ಇಮ್ರಾನ್ ಖಾನ್

18 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ

ಪತ್ರಕರ್ತ ಹೇಮಂತ್ ಸಂಪಾಜೆಗೆ ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ’ ರಾಜ್ಯ ಪ್ರಶಸ್ತಿ