ಕೊಡಗು

ರಸ್ತೆ ಅಪಘಾತ: ಮಡಿಕೇರಿಯ ಯುವಕ ಸೇರಿ 6 ಮಂದಿ ದುರ್ಮರಣ

ಮಡಿಕೇರಿ: ಜಲ್ಲಿ ಸಾಗಿಸುತ್ತಿದ್ದ ಲಾರಿಯೊಂದು ಸೋಮವಾರ ಎರಡು ಕಾರು ಹಾಗೂ ಒಂದು ಬೈಕ್ ಮೇಲೆ ಉರುಳಿ ಬಿದ್ದ ಪರಿಣಾಮ ಕೊಡಗಿನ ಅಭ್ಯತ್ ಮಂಗಲದ ಯುವಕ ಸೇರಿದಂತೆ ಒಟ್ಟು ಆರು ಮಂದಿ ಸಾವಿಗೀಡಾದ ಘಟನೆ ನಡೆದಿದೆ.

ಬೆಂಗಳೂರಿನ ಹೊರವಲಯದ ಕುಂಬಳಗೋಡು ಬಳಿ ದುರಂತ ಸಂಭವಿಸಿದ್ದು ಬೈಕ್ ನಲ್ಲಿದ್ದ ವ್ಯಕ್ತಿಯನ್ನು ಜಿತಿನ್ ಚಾರ್ಜ್ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಮೃತ ಜಿತಿನ್ ಅಭ್ಯತ್ ಮಂಗಲದ ಗ್ರೀನ್ ಫೀಲ್ಡ್ ಎಸ್ಟೇಟ್ ನ ವ್ಯವಸ್ಥಾಪಕ ಜಾರ್ಜ್ ಅವರ ಪುತ್ರರಾಗಿದ್ದಾರೆ. ಜಿತಿನ್ ಮೃತ ದೇಹವನ್ನು ಇಂದು ಸಂಜೆ ಕೊಡಗಿಗೆ ತರಲಾಗುತ್ತದೆ. ಅಂತ್ಯ ಸಂಸ್ಕಾರ ಕಾರ್ಯ ಕೇರಳದ ಪಾಲಕ್ಕಾಡ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Related posts

ಗೂನಡ್ಕ: ಕಡಪಾಲದಲ್ಲಿ ಕಳ್ಳತನವಾಗಿದ್ದ ಮೊಬೈಲ್ ಫೋನ್ 14 ದಿನಗಳ ಬಳಿಕ ಬಂಟ್ವಾಳದಲ್ಲಿ ಪತ್ತೆ..! ಕ್ಯಾಂಟಿನ್ ನಡೆಸುತ್ತಿದ್ದ ಬಡಪಾಯಿಯ ಮೊಬೈಲ್ ಅನ್ನು ಪೊಲೀಸರು ಮರಳಿ ತಂದಿದ್ದೇಗೆ..?

ಕಾರು-ಬೈಕ್‌ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

ಮಗುಚಿ ಬಿದ್ದ ಲಾರಿ, ಮೈಸೂರು-ಮಡಿಕೇರಿ ರಸ್ತೆ ಸಂಚಾರ ಬಂದ್