ಕ್ರೈಂವಿಡಿಯೋವೈರಲ್ ನ್ಯೂಸ್

ವಿಮಾನ ನಿಲ್ದಾಣದಲ್ಲಿ ರೀಲ್ಸ್ ಗಾಗಿ ಅಸಭ್ಯವಾಗಿ ವರ್ತಿಸಿದ ಯುವತಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡಿ ಹರಿಬಿಡುವವರು ಹೆಚ್ಚಾಗಿದ್ದು, ಅವರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ ಯುವತಿಯೊಬ್ಬಳು ವಿಚಿತ್ರವಾಗಿ ನಡೆದುಕೊಂಡಿದ್ದು, ರೀಲ್ಸ್ ಗಾಗಿ ನೃತ್ಯ ಮಾಡಿದ್ದಾಳೆ ಎನ್ನಲಾಗಿದೆ.

ಹಲವರು ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕುರುಕ್ಷೇತ್ರದ ‘ಆಪ್ ಕಾ ಆನಾ’ ಹಾಡಿನಲ್ಲಿ ಮಹಿಳೆಯೊಬ್ಬಳು ಸಲ್ವಾರ್ ಕುರ್ತಾ ಧರಿಸಿ ನೃತ್ಯ ಮಾಡಿದ್ದಾಳೆ. ಆಕೆಯ ಕೆಲವು ಭಂಗಿಗಳು ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದೆ.

ಅನೇಕ ಜನರು ಅವಳನ್ನು ಕುತೂಹಲದಿಂದ ನೋಡುತ್ತಿದ್ದರೆ, ಇತರರು ನೋಡಿಯೂ ನೋಡದಂತೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ”ವೈರಸ್ ವಿಮಾನ ನಿಲ್ದಾಣವನ್ನು ತಲುಪಿದೆ” ಎಂಬ ಶೀರ್ಷಿಕೆಯಡಿ @desimojito ಎಂಬ ಹೆಸರಿನ ಬಳಕೆದಾರ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಟೀಕೆಗಳಿಗೆ ಕಾರಣವಾಗಿದೆ.

Click 👇

https://newsnotout.com/2024/05/sti-arrested-prajwal-with-lady-officers
https://newsnotout.com/2024/05/police-bithday-celebration-in-traffic/

Related posts

`ಶವ ಸಂಭೋಗ’ವೂ ಅತ್ಯಾಚಾರ ಅಪರಾಧವೆಂದು ಪರಿಗಣಿಸುವಂತೆ ಕರ್ನಾಟಕ ಸರ್ಕಾರ ಮನವಿ…! ಅರ್ಜಿ ತಿರಸ್ಕರಿಸಿದ ಸುಪ್ರಿಂ ಕೋರ್ಟ್..!

ಚಾಮುಂಡೇಶ್ವರಿ ದಸರಾದ ನಡುವೆ ಮಹಿಷ ದಸರಾದ ಗಲಾಟೆ..! ರಾಕ್ಷಸರು ರಾಕ್ಷಸರನ್ನೇ ಪೂಜಿಸ್ತಾರೆ ಎಂದ ಕಲ್ಲಡ್ಕ ಪ್ರಭಾಕರ್ ಭಟ್..!

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ ನಲ್ಲಿ ಮಹತ್ವದ ಸುಳಿವು..! ಬಾಂಬರ್‌ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳಿದ್ದಾನಾ..?