ಕ್ರೈಂರಾಜ್ಯ

ರಥದ ಚಕ್ರದಡಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವು..! ಜಾತ್ರಾ ರಥೋತ್ಸವದ ವೇಳೆ ಅವಘಡ..!

ನ್ಯೂಸ್ ನಾಟೌಟ್: ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವದ ವೇಳೆ ಚಕ್ರದಡಿಗೆ ಸಿಲುಕಿ ಇಬ್ಬರು ಭಕ್ತರು ಮೃತಪಟ್ಟ ಘಟನೆ ಶನಿವಾರ ಸಂಜೆ(ಮೇ.18) ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ರಾಜ ಬೀದಿಯಲ್ಲಿ ರಥ ಸಾಗುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಏಕಾಏಕಿ ಚಕ್ರದಡಿಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ರೋಣದ ಬ್ಯಾಂಕಿನಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದ ಮಲ್ಲನಗೌಡ ಲಿಂಗನಗೌಡರ (52) ಎಂದು ಒಬ್ಬರನ್ನು ಗುರುತಿಸಲಾಗಿದೆ. ಇನ್ನೊಬ್ಬರ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click 👇

https://newsnotout.com/2024/05/anjali-mother-and-sister-issue

Related posts

287 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ ದುರಂತ ಸಾವು, ಆಗಿದ್ದೇನು..?

ಪೆರಾಜೆ: ಒಂದೇ ದಿನ ಎರಡು ಬಾರಿ ಮಸೀದಿ ಬಳಿ ಅಗ್ನಿ ಅವಘಡ! ಸ್ಥಳೀಯ ಮನೆಗಳ ಸಮೀಪ ಹರಡಿದ ಬೆಂಕಿ!

ಕೆರೆಯ ಮೀನು ತಿಂದು ಇಬ್ಬರು ಸಾವು, ಹಲವರು ಅಸ್ವಸ್ಥ..! ನೀರಿಲ್ಲದೆ ಬತ್ತಿದ್ದ ಕೆರೆಯ ಕೆಸರಿನಲ್ಲಿದ್ದ ಮೀನುಗಳಲ್ಲಿ ವಿಷವಿತ್ತಾ..?