ದೇಶ-ಪ್ರಪಂಚವೈರಲ್ ನ್ಯೂಸ್

ರಾಮಮಂದಿರದಲ್ಲಿ ಕೇವಲ 11 ದಿನಗಳಲ್ಲಿ 11 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ, 11 ಬ್ಯಾಂಕ್ ಉದ್ಯೋಗಿಗಳು ಮತ್ತು 3 ಸಿಬ್ಬಂದಿಗಳಿಂದ ಲೆಕ್ಕಾಚಾರ

ನ್ಯೂಸ್ ನಾಟೌಟ್: ಪ್ರಾಣಪ್ರತಿಷ್ಠೆಗೊಂಡು ಅಯೋಧ್ಯೆಯಲ್ಲಿ (Ayodhya) ನೂತನವಾಗಿ ನಿರ್ಮಾಣಗೊಂಡಿರುವ ರಾಮಮಂದಿರಕ್ಕೆ ಸಾಗರೋಪಾದಿಯಲ್ಲಿ ಜನ ಹರಿದುಬರುತ್ತಿದ್ದು, ಜನವರಿ 22ರಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆದ ಬಳಿಕ ರಾಮ ಮಂದಿರಕ್ಕೆ ಈವರೆಗೆ ಸುಮಾರು 25 ಲಕ್ಷ ಭಕ್ತರು ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ.

ಕಳೆದ 11 ದಿನಗಳಲ್ಲಿ 11 ಕೋಟಿ ರೂಪಾಯಿಗೂ ಹಚ್ಚಿನ ಮೊತ್ತ ಕಾಣಿಕೆ, ದೇಣಿಗೆ ಹಾಗೂ ಕೊಡುಗೆಗಳ ರೂಪದಲ್ಲಿ ಸಂಗ್ರಹವಾಗಿದೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ.

ಸಂಗ್ರಹವಾಗಿರುವ ಒಟ್ಟು ಮೊತ್ತದ ಪೈಕಿ ಸುಮಾರು 8 ಕೋಟಿ ರೂ. ಗರ್ಭಗುಡಿಗೆ ಹೋಗುವ ದರ್ಶನ ಮಾರ್ಗದಲ್ಲಿ ಇರಿಸಲಾದ ಸಾಂಪ್ರದಾಯಿಕ ಕಾಣಿಕೆ ಡಬ್ಬಿಗಳಲ್ಲಿ ಸಂಗ್ರಹವಾಗಿದೆ ಎಂದು ಟ್ರಸ್ಟ್​ ತಿಳಿಸಿದೆ. ಹೆಚ್ಚುವರಿಯಾಗಿ, 3.50 ಕೋಟಿ ರೂಪಾಯಿಗಳನ್ನು ಆನ್‌ಲೈನ್ ಮೂಲಕ ದೇಣಿಗೆಯಾಗಿ ಸ್ವೀಕರಿಸಲಾಗಿದೆ.

ಕಾಣಿಕೆ, ದೇಣಿಗೆಗಳ ಲೆಕ್ಕಾಚಾರ ಮತ್ತು ಪಾರದರ್ಶಕತೆ ಬಗ್ಗೆ ವ್ಯವಹಾರಗಳನ್ನು ನೋಡಿಕೊಳ್ಳುವ ಟ್ರಸ್ಟ್‌ನ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದು, ದಿನದ ಸಂಗ್ರಹದ ವಿವರವಾದ ಮಾಹಿತಿಯನ್ನು ಹಣ ಸಹಿತ ಟ್ರಸ್ಟ್ ಕಚೇರಿಗೆ ಸಲ್ಲಿಸುತ್ತಾರೆ. ಇದು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹೊಂದಿದೆ ಎಂದಿದ್ದಾರೆ.
ಕಾಣಿಕೆ ಹಾಗೂ ದೇಣಿಗೆ ಲೆಕ್ಕಾಚಾರಕ್ಕೆ ಟ್ರಸ್ಟ್ 11 ಬ್ಯಾಂಕ್ ಉದ್ಯೋಗಿಗಳು ಮತ್ತು ಮೂವರು ದೇವಾಲಯದ ಟ್ರಸ್ಟ್ ಸಿಬ್ಬಂದಿಯನ್ನು ಒಳಗೊಂಡ 14 ಮಂದಿಯ ತಂಡದ ಸಹಾಯವನ್ನು ಪಡೆದಿದೆ. ಪಾರದರ್ಶಕತೆಯ ದೃಷ್ಟಿಯಿಂದ ತಂಡ ರಚಿಸಿ ಹಣ ಲೆಕ್ಕಹಾಕಲಾಗಿದೆ ಎಂದಿದ್ದಾರೆ.

ಜನವರಿ 22 ರಂದು ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ನೆರವೇರಿತ್ತು. ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಿಸಿದ್ದರು. ನೂರಾರು ಗಣ್ಯರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ನಂತರ ಜನವರಿ 23ರಿಂದ ರಾಮ ಮಂದಿರಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ. ಮೊದಲ ದಿನದಿಂದಲೇ ಭಕ್ತ ಸಾಗರ ಅಯೋಧ್ಯೆಗೆ ಹರಿದು ಬರಲಾರಂಭವಾಗಿತ್ತು ಎನ್ನಲಾಗಿದೆ.

https://newsnotout.com/2024/02/tiger-artist-tulunadu/

Related posts

ಮುಲಾಯಂ ಸಿಂಗ್ ಯಾದವ್ ಸೊಸೆ ಬಿಜೆಪಿಗೆ ಸೇರ್ಪಡೆ..!

80 ಸಾವಿರ ಸಂಬಳ ಬಿಟ್ಟು ಕೆಇಎ ಪರೀಕ್ಷೆ ಬರೆಯಲು ಬಂದಿದ್ದವನಿಗೆ ಕಾದಿತ್ತು ಶಾಕ್! ಅಕ್ರಮ ಎಸಗಿದವ ಜೈಲು ಸೇರಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಜಗತ್ತಿನ ಅತಿದೊಡ್ಡ ಚಿನ್ನದ ನಿಕ್ಷೇಪ ಚೀನಾದಲ್ಲಿ ಪತ್ತೆ..! ಈ ಬಗ್ಗೆ ಭೂಗರ್ಭಶಾಸ್ತ್ರಜ್ಞರು ಹೇಳಿದ್ದೇನು..?