ಕ್ರೀಡೆ/ಸಿನಿಮಾವೈರಲ್ ನ್ಯೂಸ್

‘ಕಾಂತಾರ 2’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರಾ? ಈ ಬಗ್ಗೆ ಸಿಂಪಲ್ ಸ್ಟಾರ್ ಹೇಳಿದ್ದೇನು?

ನ್ಯೂಸ್ ನಾಟೌಟ್ : ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ (Rakshit Shetty) ಇದೀಗ ತಮ್ಮ ಹೊಸ ಸಿನಿಮಾ ತಯಾರಿಲ್ಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ. ಇದೇ ವೇಳೆ ಹಲವು ಸಂದರ್ಶನಗಳಲ್ಲಿ ಭಾಗಿಯಾಗಿದ್ದು, ಸಂದರ್ಶನವೊಂದರಲ್ಲಿ ಕಾಂತಾರ-೨ ಸಿನಿಮಾದಲ್ಲಿ ನಟಿಸುವ ಬಗ್ಗೆ ಹೇಳಿಕೊಂಡಿದ್ದಾರೆ.ಕಾಂತಾರ 2 ಸಿನಿಮಾದಲ್ಲಿ ನೀವು ನಟಿಸುತ್ತೀರಾ? ಎಂದು ಕೇಳಲಾದ ಪ್ರಶ್ನೆಗೆ, ರಿಷಬ್ ಶೆಟ್ಟಿ ಅವಕಾಶ ಕೊಟ್ಟರೆ ಖಂಡಿತಾ ನಟಿಸ್ತೀನಿ ಎಂದು ಹೇಳಿದ್ದು ಈಗ ಭಾರಿ ಸುದ್ದಿಯಗುತ್ತಿದೆ.

ರಿಷಬ್ ಶೆಟ್ಟಿ (Rishabh Shetty), ಮೊನ್ನೆಯಷ್ಟೇ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಇನ್ಮುಂದೆ ನನ್ನನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡಿ. ನಾನು ಬರೋದಿಲ್ಲ. ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುತ್ತೇನೆ’ ಎಂದಿದ್ದರು. ಅಲ್ಲಿಗೆ ಅತೀ ಶೀಘ್ರದಲ್ಲೇ ಸಿನಿಮಾ ಟೀಮ್ ಚಿತ್ರೀಕರಣಕ್ಕೆ ಹೊರಡಲಿದೆ ಎನ್ನುವ ಸೂಚನೆ ಸಿಕ್ಕಿತ್ತು. ದೀಪಾವಳಿ ದಿನದಂದು ಫ್ಯಾಮಿಲಿ ಜೊತೆಗಿನ ಫೋಟೋ ಹಂಚಿಕೊಂಡಿರುವ ರಿಷಬ್, ಆ ಫೋಟೋಗಳಲ್ಲಿ ಅವರು ಲುಕ್ ಬದಲಾಗಿದೆ. ಇದು ಚಿತ್ರಕ್ಕಾಗಿ ಮಾಡಿಕೊಂಡ ಸಿದ್ಧತೆ ಎಂದು ಹೇಳಲಾಗುತ್ತಿದೆ. ತಲೆಗೂದಲು ಮತ್ತು ಗಡ್ಡವನ್ನು ಅಪಾರ ಪ್ರಮಾಣದಲ್ಲಿ ರಿಷಬ್ ಬೆಳೆಸಿದ್ದಾರೆ. ಇದೀಗ ಮತ್ತೊಂದು ಮಾಹಿತಿ ಹೊರ ಬಿದ್ದಿದ್ದು, ರಿಷಬ್ ಈ ಸಿನಿಮಾಗಾಗಿ ತಮ್ಮ ಲುಕ್ ಅನ್ನೇ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ‘ಕಾಂತಾರ 2’ ಸಿನಿಮಾದ ಶೂಟಿಂಗ್ (Shooting) ಯಾವಾಗಿಂದ ಶುರುವಾಗಬಹುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣಕ್ಕೆ ಹೋಗುವುದಾಗಿ ರಿಷಬ್ ತಿಳಿಸಿದ್ದಾರೆ. ಸ್ಕ್ರಿಪ್ಟ್ ಮತ್ತು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ರಿಷಬ್ ಸದ್ಯ ಬ್ಯುಸಿಯಾಗಿದ್ದಾರೆ.
ಸಿನಿಮಾ ಶೂಟಿಂಗ್ ಗಾಗಿ ಈ ಬಾರಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ ರಿಷಬ್. ಕಾಂತಾರ ಸಿನಿಮಾ ಕೇವಲ ಅವರ ಊರಿನಲ್ಲಿ ಮಾತ್ರ ಚಿತ್ರೀಕರಣವಾಗಿತ್ತು. ಈ ಬಾರಿ ಅವರ ಊರಿನ ಜೊತೆಗೆ ನಾನಾ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Related posts

2 ವರ್ಷದಿಂದ ಪ್ರೀತಿಸಿದ್ದ ಯುವತಿಗೆ ಗ್ರಾಮಸ್ಥರ ಮುಂದೆಯೇ ಚಾಕು ಇರಿತ..! ಯುವಕ ಪರಾರಿ..!

ಗಡ್ಡ ತೆಗೆಯುವಂತೆ ಕಾಲೇಜು ಆಡಳಿತ ಮಂಡಳಿಯಿಂದ ಆದೇಶ, ಮುಸ್ಲಿಂ ವಿದ್ಯಾರ್ಥಿಗಳಿಂದ ಆಕ್ರೋಶ..!

ಉಪ್ಪಿನಂಗಡಿ: ಸರ್ಕಾರಿ ಜಮೀನಿನಲ್ಲಿ ಕಟ್ಟಿದ್ದ ಮನೆಯನ್ನು ಕೆಡವಿದ ಕಂದಾಯ ಅಧಿಕಾರಿಗಳು..! ಚಿತ್ರದುರ್ಗದಿಂದ ಬಂದು ನೆಲೆಸಿದ್ದ ವೃದ್ಧ ದಂಪತಿ