ಕರಾವಳಿಕ್ರೀಡೆ/ಸಿನಿಮಾ

ಶೀಘ್ರವೇ ಖ್ಯಾತ ನಟ ರಾಜ್‌ ಬಿ ಶೆಟ್ಟಿಯ ಹೊಸ ಸಿನಿಮಾ ತೆರೆಗೆ! ಕುತೂಹಲ ಹೆಚ್ಚಿಸಿದ ಆ್ಯಕ್ಷನ್‌ ಸಿನಿಮಾ ಯಾವುದು ಗೊತ್ತಾ?

ನ್ಯೂಸ್ ನಾಟೌಟ್: ಕರಾವಳಿಯ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಅವರ ಹೊಸ ಸಿನಿಮಾದ ರಿಲೀಸ್‌ ಡೇಟ್ ಇಂದು (ಜೂನ್ 13) ಘೋಷಣೆಯಾಗಿದೆ.
‘ಗರುಡ ಗಮನ ವೃಷಭ ವಾಹನʼ ಸಿನಿಮಾ ಹಿಟ್‌ ಆಗಿತ್ತು. ಸಿನಿಮಾದ ಕೆಂಟೆಂಟ್‌ ಭಿನ್ನವಾಗಿತ್ತು. ಕರಾವಳಿಯ ಹುಲಿವೇಷ, ವಾತಾವರಣ ಭಾಷಾ ಸೊಗಡು ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೇ ತಂಡವನ್ನಿಟ್ಟುಕೊಂಡು ರಾಜ್‌ ಬಿ ಶೆಟ್ಟಿ ಮತ್ತೊಂದು ಸಿನಿಮಾವನ್ನು ನಿರ್ಮಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದ ಕಾಂತಾರ ಸಿನಿಮಾದಲ್ಲೂ ರಾಜ್ ಬಿ ಶೆಟ್ಟಿ ಸಿನಿಮಾ ಕೊರಿಯೋಗ್ರಾಫರ್ ಆಗಿ ಕೈ ಚಳಕ ತೋರಿದ್ದರು.

ರಾಜ್‌ ಬಿ ಶೆಟ್ಟಿ ಅವರ ʼ ಲೈಟರ್ಸ್ ಬುದ್ಧ ಫಿಲ್ಮ್ʼ ʼ ಅಗಸ್ತ್ಯ ಫಿಲ್ಮ್ಸ್ʼ ಅವರೊಂದಿಗೆ ಜಂಟಿಯಾಗಿ ಬರುತ್ತಿರುವ ಸಿನಿಮಾಕ್ಕೆ “ಟೋಬಿ“ ಎಂಬ ಟೈಟಲ್‌ ಇಡಲಾಗಿದೆ. ಪೋಸ್ಟರ್‌ ನಲ್ಲಿ ಮೊದಲು ತಿಳಿಸಿದಂತೆ ಇದೊಂದು ಆ್ಯಕ್ಷನ್‌ ಸಿನಿಮಾವಾಗಿರಲಿದೆ.

ರೋಷದಲ್ಲಿರುವ ಕುರಿಯ ಮುಖವನ್ನು ತೋರಿಸಿ ಹಿನ್ನೆಲ್ಲೆಯಲ್ಲಿ “ಮಾರಿ.. ಮಾರಿ.. ಮಾರಿಗೆ ದಾರಿ” ಹಾಡು ಪ್ಲೇ ಆಗಿದೆ. ಫೋಟೋ ಹಿಂದೆ ಮಿಸ್ಸಿಂಗ್‌ ಎಂದು ಬರೆದಿದ್ದಾರೆ. ಪುಟ್ಟ ಟೀಸರ್‌ ನಲ್ಲಿ ಸಿನಿಮಾ ಆಗಸ್ಟ್‌ 25 ರಂದು ರಿಲೀಸ್‌ ಆಗಲಿದೆ ಎಂದು ಅನೌನ್ಸ್‌ ಮಾಡಿದ್ದಾರೆ. ಟೀಸರ್‌ ಮೂಲಕ ಸಿನಿಮಾದ ಮೇಲಿನ ಕುತೂಹವನ್ನು ಹೆಚ್ಚಿಸಿದ್ದಾರೆ.
ಅಂದಹಾಗೆ ಈ ಸಿನಿಮಾವನ್ನು ಬಾಸಿಲ್ ಅಲ್ಚಕ್ಕಲ್ ಅವರು ನಿರ್ದೇಶನ ಮಾಡಿದ್ದಾರೆ.

Related posts

ಗುತ್ತಿಗಾರು : ಸಂಸದ ರಾಜ್ಯ ಬಿ.ಜೆ.ಪಿ ಅಧ್ಯಕ್ಷ ನಳೀನ್ ಕುಮಾರ್ ಭೇಟಿ

ಗಲಭೆ ಕೇಸ್‌ ನ108 ಆರೋಪಿಗಳಿಗೆ ಜಾಮೀನು, ದರ್ಗಾದಲ್ಲಿ ಮುಸ್ಲಿಮರ ಸಂಭ್ರಮಾಚರಣೆ

ಗ್ಯಾಸ್ ಸಿಲಿಂಡರ್ ಬೇಡ,2-3 ಪೀಸ್ ಸೌದೆ ,ಕರೆಂಟ್ ಚಾರ್ಜ್ ಇದ್ದರೆ ಸಾಕು ಅಡುಗೆ ರೆಡಿ