ಕರಾವಳಿ

ಗುತ್ತಿಗಾರು : ಸಂಸದ ರಾಜ್ಯ ಬಿ.ಜೆ.ಪಿ ಅಧ್ಯಕ್ಷ ನಳೀನ್ ಕುಮಾರ್ ಭೇಟಿ

ಗುತ್ತಿಗಾರು : ಗುತ್ತಿಗಾರು ಸ.ಮಾ.ಹಿರಿಯ ಪ್ರಾಥಮಿಕ ಶಾಲೆಗೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸದರನ್ನು ಶಾಲಾ ವತಿಯಿಂದ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಶಾಲಾ ಪ್ರಭಾರ ಮುಖ್ಯಶಿಕ್ಷಕ ದಯಾನಂದ ಮುತ್ಲಾಜೆ ಸಂಸದರನ್ನು ಸನ್ಮಾನಿಸಿದರು. ಹೆಚ್ಚುವರಿ ಕೊಠಡಿ ಬೇಡಿಕೆಯ ಬಗ್ಗೆ ಮನವಿ ಸಲ್ಲಿಸಿದರು. ಮನವಿಗೆ ಪೂರಕವಾಗಿ ಸ್ಪಂದಿಸಿ ಮಾತನಾಡಿದ ಸಂಸದರು ಶಾಲೆಯ ಬಗ್ಗೆ ಉತ್ತಮ ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಗ್ರಾ.ಪಂ.ಸದಸ್ಯ ವೆಂಕಟ್ ವಳಲಂಬೆ, ತಾ.ಪಂ.ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್, ಗ್ರಾ.ಪಂ.ಅಧ್ಯಕ್ಷೆ ರೇವತಿ ಆಚಳ್ಳಿ, ಕುಲಾಶ್ರೀ ಬಾಕಿಲ, ಶಾಲಾ ಶಿಕ್ಷಕ ವೃಂದ, ಎಸ್, ಡಿ,ಎಂ,ಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Related posts

ಮಂಗಳೂರು: ಇಂದಿನಿಂದ ದ.ಕ. ಜಿಲ್ಲೆಗೆ ಪ್ರಭಾರ ಎಸ್.ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ

ಉಪ್ಪಿನಂಗಡಿ: ನೀರಿಗೆ ಮುಳುಗಿ ಯುವಕ ಮೃತ್ಯು

ಸುರತ್ಕಲ್ : ನನ್ನ ಜೊತೆ ಸಹಕರಿಸು ಇಲ್ಲಾಂದ್ರೆ 24 ತುಂಡು ಮಾಡುವೆ ಎಂದು ಮೆಸೇಜ್..! ಯುವಕ ಪೊಲೀಸ್ ವಶಕ್ಕೆ..!