ಕ್ರೈಂರಾಜ್ಯವೈರಲ್ ನ್ಯೂಸ್

ರಾತ್ರಿ ಪಾರ್ಟಿ ಮಾಡಿ ರೈಲ್ವೆ ಹಳಿಯಲ್ಲೇ ಕುಡಿದು ಮಲಗಿದ ಯುವಕರು..! ರೈಲು ಹರಿದು 3 ಮಂದಿ ಸ್ಥಳದಲ್ಲೇ ಸಾವು..!

ನ್ಯೂಸ್ ನಾಟೌಟ್: ರೈಲ್ವೆ ಹಳಿ (Railway Track) ಮೇಲೆ ಮದ್ಯ ಕುಡಿದು ಮಲಗಿದ್ದವರ ಮೇಲೆ ರೈಲು ಹರಿದಿದ್ದರಿಂದ 3 ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗಂಗಾವತಿ ನಗರದ ಹೊರವಲಯದಲ್ಲಿ ನಡೆದಿದೆ.

ಕಳೆದ ರಾತ್ರಿ (ಜು.18) 9:30ಕ್ಕೆ ಹುಬ್ಬಳ್ಳಿ-ಸಿಂದನೂರು ಎಕ್ಸಪ್ರೆಸ್ ರೈಲು ಯುವಕರ ಮೇಲೆ ಹರಿದಿದೆ. ಮೂವರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಂಗಾವತಿ ನಗರದ ನಿವಾಸಿಗಳಾದ ಮೌನೇಶ್ ಪತ್ತಾರ (23), ಸುನೀಲ್ (23), ವೆಂಕಟ್ ಭೀಮನಾಯ್ಕ (20) ಮೃತ ಯುವಕರು ಎಂದು ಗುರುತಿಸಲಾಗಿದೆ.

ಮೂವರು ಯುವಕರು ಕಳೆದ ರಾತ್ರಿ ರೈಲ್ವೆ ಹಳಿ ಬಳಿಯೇ ಪಾರ್ಟಿ ಮಾಡಿ, ನಂತರ ಹಳಿ ಮೇಲೆಯೇ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click 👇

https://newsnotout.com/2024/07/hardik-padya-divorce-announcement-officially-with-padya-kannada-news/
https://newsnotout.com/2024/07/dengue-awarness-reels-and-reward-for-that-kannada-news-viral-news/
https://newsnotout.com/2024/07/education-and-conflict-in-festivals-kannada-news-viral-post/
https://newsnotout.com/2024/07/hotel-student-suspence-kannada-police-investiagtion-kananfda-newsa-news/
https://newsnotout.com/2024/07/belthagady-flood-rain-kannada-news-land-slide-traffic-dc/
https://newsnotout.com/2024/07/indo-pak-war-weapons-found-in-pond-of-fishing-kannada-news-viral-video/

Related posts

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿ ಹಾಕದೆ ವಾಪಸ್ ಕಳುಹಿಸಿದ್ದೇಕೆ ರಾಜ್ಯಪಾಲರು..? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರಿನ ರೂಫ್ ಮೇಲೆ ನಾಯಿ ಮರಿಗಳನ್ನು ಕೂರಿಸಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ..! ಪ್ರಶ್ನಿಸಿದವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ..! ಇಲ್ಲಿದೆ ವಿಡಿಯೋ

ಮರ್ಕಂಜ: ಸೇವಾಜೆಯ ಅಜ್ಜ ನಾಪತ್ತೆ ಪ್ರಕರಣಕ್ಕೆ ಜ್ಯೋತಿಷ್ಯನ ಟ್ವಿಸ್ಟ್..!, ಕಾಡಿನೊಳಗಿನ ನಿಗೂಢ ಮನೆಯಲ್ಲಿ ಹುಡುಕಲು ಹೋದವರಿಗೆ ಸಿಕ್ಕಿದ್ದೇನು..?