ರಾಜಕೀಯವೈರಲ್ ನ್ಯೂಸ್

ರಾಹುಲ್ ಗಾಂಧಿ ಮತ್ತೆ ಸಂಸದ ಸ್ಥಾನ ಕಳೆದುಕೊಳ್ಳಲಿದ್ದಾರಾ? ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದ್ದೇಕೆ..?

ನ್ಯೂಸ್ ನಾಟೌಟ್: ಮೋದಿ ಸರ್ ಹೆಸರಿನ ವಿಚಾರದಲ್ಲಿ ವ್ಯಂಗ್ಯವಾಡಿ ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾಗಿ ಸಂಸದ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿತ್ತು. ಈಗ ಮತ್ತೆ ಪ್ರಧಾನಿಗೆ ಅವಹೇಳನಕಾರಿ ಮಾತನಾಡಿದ್ದಕ್ಕೆ ಬಿಜೆಪಿ ಚುನಾವಣಾ ಆಯೋಗದ ಮೊರೆ ಹೋಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತಾಗಿ ಅವಹೇಳನಕಾರಿಯಾಗಿ ‘ಅಪಶಕುನ’ದ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಈ ಸಂಬಂಧ ಬಿಜೆಪಿ ದೂರು ದಾಖಲಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಕಳೆದ ಭಾನುವಾರ ನವೆಂಬರ್ 19 ರಂದು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕದಿನ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದ ವೀಕ್ಷಣೆಗೆ ಪ್ರಧಾನಿ ಮೋದಿ ತೆರಳಿದ್ದರು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಸೋಲನ್ನಪ್ಪಿತ್ತು. ವಿಶ್ವ ಕಪ್ ಗೆಲುವಿನಿಂದ ಭಾರತ ವಂಚಿತವಾಗಿತ್ತು.
ಈ ಸಂದರ್ಭವನ್ನೇ ಬಳಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಂದ್ಯ ವೀಕ್ಷಿಸಲು ಪ್ರಧಾನಿ ಮೋದಿ ಹೋಗಿದ್ದ ಕಾರಣದಿಂದಲೇ ಭಾರತ ಸೋಲು ಕಂಡಿತು ಎಂದು ವ್ಯಂಗ್ಯವಾಡಿದ್ದರು. ಪ್ರಧಾನಿ ಮೋದಿ ಅವರನ್ನು ಅಪಶಕುನಕ್ಕೆ ಹೋಲಿಸಿದ್ದ ರಾಹುಲ್ ಗಾಂಧಿ, ಪ್ರಧಾನಿ ಕಾರಣದಿಂದಲೇ ಭಾರತ ಸೋಲು ಕಂಡಿತು ಎಂದು ಹೇಳಿದ್ದರು. ಪಿಎಂ ಎಂದರೆ ‘ಪನೌತಿ ಮೋದಿ’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಭಾರತಕ್ಕೆ ಪ್ರಧಾನಿ ಮೋದಿ ದುರಾದೃಷ್ಟ ತಂದರು ಎಂದು ಹೀಗಳೆದಿದ್ದರು. ಹಿಂದಿಯ ಪನೌತಿ ಎಂಬ ಪದಕ್ಕೆ ಕನ್ನಡದಲ್ಲಿ ಅಪಶಕುನ ಎನ್ನಲಾಗುತ್ತದೆ.
ಪ್ರಧಾನಿ ಮೋದಿ ಅವರು ಟಿವಿಗಳಲ್ಲಿ ಹಿಂದೂ ಹಾಗೂ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ. ಕೆಲವು ವೇಳೆ ಕ್ರಿಕೆಟ್ ಪಂದ್ಯ ವೀಕ್ಷಿಸಲೂ ಹೋಗುತ್ತಾರೆ. ಪ್ರಧಾನಿ ಮೋದಿ ಹೋದ ಹಲವು ಪಂದ್ಯಗಳಲ್ಲಿ ಸೋಲಾಗಿದೆ. ಅವರೊಬ್ಬ ಅಪಶಕುನ ಎಂದು ರಾಹುಲ್ ಗಾಂಧಿ ಹೇಳಿದ್ದರು. ಚುನಾವಣಾ ಅಖಾಡದಲ್ಲಿ ರಾಹುಲ್ ಗಾಂಧಿ ನೀಡಿದ್ದ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Related posts

TDP ಮುಖ್ಯಸ್ಥ ಚಂದ್ರ ಬಾಬು ನಾಯ್ಡು ಆಸ್ತಿ ಮೌಲ್ಯ ಒಂದೇ ವಾರಕ್ಕೆ 870 ಕೋಟಿ ರೂ. ಹೆಚ್ಚಳ..! ಇಷ್ಟೊಂದು ಆದಾಯ ಜಿಗಿತಗೊಂಡಿದ್ದೇಗೆ..?

ದಬಕ್ ದಬಾ ಐಸಾ..! ರಸ್ತೆ ಮಧ್ಯೆ ಕೆಟ್ಟು ನಿಂತ ಓಮ್ನಿ ಕಾರನ್ನು ತಳ್ಳಿದ ಶಾಸಕ ಅಶೋಕ್ ರೈ

ಹೈಸ್ಕೂಲ್ ಮಕ್ಕಳಿಂದ ಅಕ್ರಮ ಬಡ್ಡಿ ವ್ಯವಹಾರ..! ಅಪ್ರಾಪ್ತರು ಸೇರಿ 25 ವಿದ್ಯಾರ್ಥಿಗಳ ಬಂಧನ..!