ಕರಾವಳಿ

ಪುತ್ತೂರಿನ ಕಬಕದಲ್ಲಿ ಉಗ್ರಗಾಮಿ ಚಟುವಟಿಕೆ, ಹಿಂದಿದ್ದಾನೆ ನಿವೃತ್ತ ಐಪಿಎಸ್ ಅಧಿಕಾರಿ..!

ನ್ಯೂಸ್ ನಾಟೌಟ್ : ಕರಾವಳಿಯಲ್ಲಿ ಭಯೋತ್ಪಾದಕರ ಕರಾಳ ಹೆಜ್ಜೆಗಳ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಪಿಎಫ್ಐ ನಿಷೇಧ ಹಾಗೂ ನಾಯಕರ ಬಂಧನದ ಬಳಿಕ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಎದುರು ಒಂದೊಂದೇ ಸತ್ಯಗಳು ಹೊರ ಬರುತ್ತಿವೆ. ಅಚ್ಚರಿ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ಭಯೋತ್ಪಾದಕ ಚುಟುವಟಿಕೆಗಳು ನಡೆಯುತ್ತಿದ್ದವು ಅನ್ನುವ ವಿಚಾರ ಎಲ್ಲರಿಗೂ ಈಗ ಶಾಕಿಂಗ್ ಸುದ್ದಿಯಾಗಿದೆ.

ಕರ್ನಾಟಕದ ಪಿಎಫ್‌ಐ ಮುಖಂಡನ್ನು ವಿಚಾರಣೆಗೊಳಪಡಿಸಿದಾಗ ಆಘಾತಕಾರಿ ಅಂಶಗಳು ಬಯಲಾಗಿದೆ. ಪುತ್ತೂರು ತಾಲೂಕಿನ ಕಬಕ ಸಮೀಪದ ಮಿತ್ತೂರಿನಲ್ಲಿರುವ ‘ಫ್ರೀಡಂ ಹಾಲ್ ನಲ್ಲಿ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಅಂಶ ಬಯಲಾಗಿದ್ದು ಸ್ವತಃ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಮಿತ್ತೂರಿನ ಫ್ರೀಡಂ ಪಾಲ್ ಗೆ ಇತ್ತೀಚೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು. ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ ತನಿಖೆ ತೀವ್ರಗೊಳಿಸಿದ್ದರು.

ಬಂಧಿತ ಪಿಎಫ್‌ಐ ಮುಖಂಡರು ಇದೀಗ ತನಿಖಾ ದಳದ ಅಧಿಕಾರಿಗಳ ಎದುರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮಿತ್ತೂರು ಫ್ರೀಡಂ ಸಭಾಂಗಣದಲ್ಲಿ ಭಯೋತ್ಪಾದನೆಯ ತರಬೇತಿ ನಡೆಯುತ್ತಿತ್ತು, ಕೇರಳದ ನಿವೃತ್ತ ಪೊಲೀಸ್ ಅಧಿಕಾರಿ ಓರ್ವರು ಬಂದು ತರಬೇತಿ ನೀಡುತ್ತಿದ್ದರು, ಯಾವ ರೀತಿ ಚಟುವಟಿಕೆ ನಡೆಸಬೇಕು, ಪೊಲೀನ್ ಇಲಾಖೆಯನ್ನು ಹೇಗೆ ಸುಧಾರಿಸಬೇಕು, ಯಾವ ರೀತಿ ಗುಪ್ತ ಚಟುವಟಿಕೆ ನಡೆಸಬೇಕು, ಪೊಲೀನರಿಗೆ ಸಿಕ್ಕಿ ಬಿದ್ದರ ಏನಲ್ಲಾ ಮಾಡಬೇಕು, ಯಾವ ರೀತಿಯಲ್ಲಿ ಟಾರ್ಗೆಟ್ ರೀಚ್ ಆಗಬೇಕು, ಯಾರನ್ನು ಗುರಿಯಾಗಿಟ್ಟುಕೊಳ್ಳಬೇಕು ಎಂಬಿತ್ಯಾದಿ ಗಂಭೀರ ವಿಚಾರಗಳ ಕುರಿತು ನಿವೃತ್ತ ಐಪಿಎಸ್ ಅಧಿಕಾರಿ ತರಬೇತಿ ನೀಡಿದ್ದರು ಅನ್ನುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ದೇಶವನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ಪುತ್ತೂರಿಗೆ ಬಂದು ಉಗ್ರ ಚಟುವಟಿಕೆ ನಡೆಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಆತನ ನಿಕಟವರ್ತಿಗಳಾಗಿದ್ದ ಆರು ಮಂದಿ ಪಿಎಫ್‌ಐ ಮುಖಂಡರಿಗೆ ಎನ್‌ಐಎ ಅಧಿಕಾರಿಗಳು ಈಗ ಡ್ರಿಲ್ ಮಾಡಿದ್ದಾರೆ. ಶೀಘ್ರದಲ್ಲೇ ನಿವೃತ್ತ ಐಎಎಸ್ ಅಧಿಕಾರಿಯ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Related posts

ರಾಜ್ಯದಾದ್ಯಂತ ‘ರವಿಕೆ ಪ್ರಸಂಗ’ ಮೂವಿ ರಿಲೀಸ್..! ಸಾಮಾಜಿಕ ಜಾಲತಾಣದಲ್ಲಿ ಜನ ಹೇಳಿಕೊಂಡಿದ್ದೇನು?

ಪುತ್ತೂರು: ಅತ್ಯಾಚಾರ ಪ್ರಕರಣದ ತನಿಖೆ ಮತ್ತು ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ..! ಅರುಣ್‌ ಕುಮಾರ್‌ ಪುತ್ತಿಲಗೆ ತಾತ್ಕಾಲಿಕ ರಿಲೀಫ್..!

ಸುಳ್ಯ: ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ‘ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ’, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನೆ